ತ್ರಿಕೋನ ಲವ್, ಭೀಕರ ಕೊಲೆಯಲ್ಲಿ ಅಂತ್ಯ

Man Stabs friend to death, Bangalore
ಬೆಂಗಳೂರು, ಅ.17: ತ್ರಿಕೋನ ಪ್ರೇಮ ಪ್ರಕರಣವೊಂದು ಪ್ರಿಯಕರನ ಕೊಲೆಯಲ್ಲಿ ಅಂತ್ಯವಾಗಿದೆ. ನಗರದ ಎಚ್ ಎಸ್ ಆರ್ ಲೇಔಟ್ ನಲ್ಲಿ 24 ವರ್ಷ ವಯಸ್ಸಿನ ಯುವಕನ ಕೊಲೆಯಾಗಿದೆ.

ಕೌಶಿಕ್ (24) ಎಂಬುವವನನ್ನು ಮಧ್ಯಪ್ರದೇಶ ಮೂಲದ ರವಿ ರಾಣಾ ಸಿಂಗ್ ಎಂಬುವನು ಇರಿದು ಕೊಂದಿದ್ದಾನೆ. ಇಬ್ಬರು ಯುವಕರು ಅಪರ್ಣಾ ಎಂಬ ಹುಡುಗಿಯ ಹಿಂದೆ ಬಿದ್ದದ್ದರು.

ಎಚ್ ಎಸ್ ಆರ್ ಲೇಔಟ್ ನ ಫ್ಯಾಷನ್ ಡಿಸೈನ್ ಕಂಪನಿಯಲ್ಲಿ ಉದ್ಯೋಗಿ ಅಪರ್ಣಾ ಮೇಲೆ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಆರೋಪಿ ರವಿ ಇಬ್ಬರು ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದಾರೆ. ಅಲ್ಲದೆ ಇಬ್ಬರು ಸಹಪಾಠಿಗಳಾಗಿದ್ದಾರೆ.

ಆದರೆ, ಅಪರ್ಣಾ ಮಾತ್ರ ಕೌಶಿಕ್ ಜೊತೆ ಓಡಾಡುತ್ತಿದ್ದಳು. ಇದನ್ನು ಕಂಡ ರವಿ ಆಕ್ಷೇಪಿಸಿದ್ದಾನೆ. ಆದರೆ, ಅಪರ್ಣಾ ಕ್ಯಾರೆ ಎನ್ನಲಿಲ್ಲ.

ಎಚ್ ಎಸ್ ಆರ್ ಲೇಔಟ್ ನ ಮೂರನೇ ಹಂತದಲ್ಲಿರುವ ಅಪರ್ಣಳ ಮನೆಯಲ್ಲಿ ನಿನ್ನೆ ಸಂಜೆ ಅಪರ್ಣ ಹಾಗೂ ಕೌಶಿಕ್ ರನ್ನು ಒಟ್ಟಿಗೆ ಕಂಡ ರವಿ ಪಿತ್ತ ನೆತ್ತಿಗೇರಿದೆ. ಚಾಕು ತೆಗೆದುಕೊಂಡು ಇಬ್ಬರನ್ನು ಅಟ್ಟಿಸಿಕೊಂಡು ಹೋಗಿದ್ದಾನೆ.

ಮನೆಯೊಳಗೆ ಇಬ್ಬರು ಓಡಿದ್ದಾರೆ. ಆದರೆ ರವಿ ಇಬ್ಬರಿಗೂ ಥಳಿಸಿ, ಮನಬಂದಂತೆ ಇರಿದಿದ್ದಾನೆ, ತೀವ್ರವಾಗಿ ಗಾಯಗೊಂಡಿದ್ದ ಕೌಶಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪರ್ಣಾ ಗ್ರೀನ್ ವೀಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಘಟನಾ ಸ್ಥಳದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿ, ಕೈ ಕುಯ್ದುಕೊಂಡು ನಾಲ್ಕನೇ ಮಹಡಿಯಿಂದ ಬಿದ್ದು ಗಾಯಗೊಂಡಿದ್ದಾನೆ. ಮೂವರು ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಪದವೀಧರರು ಎಂದು ತಿಳಿದು ಬಂದಿದೆ.

ಕೊಲೆ ಪ್ರಕರಣ ದಾಖಲಾಗಿದೆ. ಅಪರ್ಣಾ ಸ್ಥಿತಿ ಚಿಂತಾಜನಕವಾಗಿದೆ. ರವಿ ಕೂಡಾ ಆಸ್ಪತ್ರೆಯಲ್ಲಿದ್ದಾನೆ. ತನಿಖೆ ಮುಂದುವರೆದಿದೆ ಎಂದು ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+