ಗಾಲಿ ರೆಡ್ಡಿಗಿಲ್ಲ ಜಾಮೀನು, ಅ.31ರವರೆಗೂ ಜೈಲು

ಓಎಂಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ್ ರೆಡ್ಡಿಗೂ ಜಾಮೀನು ನೀಡಲು ವಿಶೇಷ ನ್ಯಾಯಾಲಯ ನಿರಾಕರಿಸಿ ಇಬ್ಬರ ನ್ಯಾಯಾಂಗ ಬಂಧನ ಅವಧಿಯನ್ನು ಅ.31ರವರೆಗೂ ವಿಸ್ತರಿಸಿದೆ.
ತೆಲಂಗಾಣ ಹೋರಾಟಕ್ಕೆ ವಕೀಲರು ಕೂಡಾ ಬೆಂಬಲ ವ್ಯಕ್ತಪಡಿಸಿರುವುದರಿಂದ ಸಿಬಿಐ ನ್ಯಾಯಲಯದ ಪ್ರಕ್ರಿಯೆಗೆ ಕೊಂಚ ತೊಡಕಾಗಿತ್ತು. ಆದರೆ, ಚಂಚಲಗುಡ ಜೈಲು ಹಾಗೂ ನ್ಯಾಯಾಲಯದ ನಡುವೆ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಏರ್ಪಡಿಸಿ, ವಿಚಾರಣೆ ನಡೆಸಲಾಯಿತು.
ಸೆ.30ರಂದು ಜಾಮೀನು ಅರ್ಜಿ ತಿರಸ್ಕಾರಗೊಂಡ ನಂತರ, ಸಿಬಿಐ ವಶದಿಂದ ಹಾರಿ ಚಂಚಲಗುಡ ಜೈಲಿಗೆ ಬಂದಿದ್ದ ಈ ಇಬ್ಬರು ಆರೋಪಿಗಳು ವಿಚಾರಣೆ ಭಯವಿಲ್ಲದೆ ಅ.31ರವರೆಗೂ ಕಾಲಕಳೆಯಬಹುದಾಗಿದೆ.
ಈ ಹಿಂದೆ ಆರು ದಿನಗಳ ಕಾಲ ವಿಚಾರಣೆ ನಡೆಸಿದರೂ ಮೂಗ ಬಸವನಂತೆ ಕೂತಿದ್ದ ಗಾಲಿ ರೆಡ್ಡಿ ಬಾಯಿ ಬಿಡಿಸಲು ಸೋತ ಸಿಬಿಐ ತಂಡ ಮತ್ತೆ ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.












Click it and Unblock the Notifications