ಮಾಜಿ ಸಿಎಂ ಯಡಿಯೂರಪ್ಪ ಎಲ್ಲಿದ್ದಾರೆ ಹೇಗಿದ್ದಾರೆ!?

Where is BSY now?
ಬೆಂಗಳೂರು, ಅ.15: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಶನಿವಾರ ವಜಾಗೊಳಿಸಿ ಅವರ ಬಂಧನಕ್ಕೆ ವಾರೆಂಟ್ ಜಾರಿಮಾಡಿದೆ. ಆದರೆ ಬಿ ಎಸ್ ಯಡಿಯೂರಪ್ಪನವರು ಎಲ್ಲಿದ್ದಾರೆ? ಹೇಗಿದ್ದಾರೆ?

ಸದ್ಯಕ್ಕೆ ಎಲ್ಲರನ್ನೂ ಕಾಡುತ್ತಿರುವ ಮಹತ್ವದ ಪ್ರಶ್ನೆ ಇದು! ಮಾಜಿ ಸಿಎಂ ಎಲ್ಲೂ ಹೋಗಿಲ್ಲ ಬೆಂಗಳೂರಿನ ರೇಸ್‌ಕೋರ್ಸ್ ನಿವಾಸದಲ್ಲೇ ಇದ್ದಾರೆ. ಆದರೆ ಮಾಧ್ಯಮಗಳ ಕಣ್ಣಿಗೆ ಮಾತ್ರ ಅವರು ಬೀಳದಂತೆ ಜಾಗ್ರತೆ ವಹಿಸಿದ್ದಾರೆ ಅಷ್ಟೆ.

ಲೋಕಾಯುಕ್ತ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಯಡಿಯೂರಪ್ಪ ಥರಗುಟ್ಟಿಹೋಗಿದ್ದಾರೆ. ಅವರಿಗೆ ಧೈರ್ಯ ತುಂಬಲು ಜೊತೆ ಇಂಧನ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ, ಸಾರಿಗೆ ಹಾಗೂ ಗೃಹ ಸಚಿವ ಆರ್ ಅಶೋಕ್, ವಸತಿ ಸಚಿವ ವಿ ಸೋಮಣ್ಣ ಸೇರಿದಂತೆ ಹಲವು ಬಿಜೆಪಿ ಮುಖಂಡರು ಬಿಎಸ್‌ವೈ ಅವರನ್ನು ಸಾಂತ್ವಗೊಳಿಸುತ್ತಿದ್ದಾರೆ.

ಬೆನ್ನುನೋವಿನ ಕಾರಣ ನೀಡಿ ಕೋರ್ಟ್‌ಗೆ ಯಡಿಯೂರಪ್ಪ ಗೈರುಹಾಜರಾಗಿದ್ದರು. ಶನಿವಾರ (ಅ.15) ಸಂಜೆ 4 ಗಂಟೆ ಒಳಗೆ ಯಡಿಯೂರಪ್ಪ ಅವರನ್ನು ಬಂಧಿಸಬೇಕು ಎಂಬ ಆದೇಶ ಅರೆಸ್ಟ್ ವಾರೆಂಟ್‌ನಲ್ಲಿದೆ. ತಮ್ಮ ಮುಂದಿನ ನಡೆ ಏನು ಎಂಬ ಚಿಂತನೆಯಲ್ಲಿ ಬಿಎಸ್‌ವೈ ಹಾಗೂ ಬಿಜೆಪಿ ಮುಖಂಡರು ಮಗ್ನರಾಗಿದ್ದಾರೆ. ಯಾವುದೇ ಬಿಜೆಪಿ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+