ಕಟಕಟೆಯಲ್ಲಿ ಗಳಗಳನೆ ಅತ್ತ ಯಡ್ಡಿ ಬಂಟ ಕೃಷ್ಣಯ್ಯ

Krishnaiah Shetty, Malur MLA
ಬೆಂಗಳೂರು, ಅ. 15 : ಬೇಲ್ ನಿರಾಕರಣೆಯಾಗಿ ಪರಪ್ಪನ ಅಗ್ರಹಾರ ಜೈಲೇ ಗತಿ ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಕೋಲಾರ ಜಿಲ್ಲೆ ಮಾಲೂರಿನ ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಅವರು ಕಟಕಟೆಯಲ್ಲಿಯೇ ಕುಸಿದು ಕುಳಿತು ಗಳಗಳನೆ ಅತ್ತಿದ್ದಾರೆ.

ಮುಜರಾಯಿ ಖಾತೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಮಧುಮೇಹ ಮತ್ತು ಹೈಬಿಪಿಯಿಂದ ಬಳಲುತ್ತಿದ್ದಾರೆ ಕೃಪೆ ತೋರಿಸಬೇಕೆಂದು ಮಾಡಿದ ಮನವಿಗೆ ಒಪ್ಪಿದ ನ್ಯಾಯಾಧೀಶ ಸುಧೀಂದ್ರ ರಾವ್ ಅವರು ಶೆಟ್ಟಿ ಅವರನ್ನು ಮೊದಲು ಸರಕಾರಿ ಆಸ್ಪತ್ರೆಗೆ ಕರೆದೊಯ್ದು, ಪ್ರಥಮ ಚಿಕಿತ್ಸೆ ನೀಡಿ ನಂತರ ಜೈಲಿಗೆ ಕಳಿಸಿ ಎಂದು ಆದೇಶ ನೀಡಿದ್ದರು.

ಇದರ ಪ್ರಕಾರ, ಅವರನ್ನು ವಿಕ್ಟೋರಿಯಾ ಅಥವಾ ಬೌರಿಂಗ್ ಆಸ್ಪತ್ರೆಗೆ ಕರೆಯೊದ್ಯು ಚಿಕಿತ್ಸೆ ನೀಡಲಾಗಿದ್ದು, ಆಂಬುಲನ್ಸ್ ಮುಖಾಂತರ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಕೃಷ್ಣಯ್ಯ ಶೆಟ್ಟಿ ಅವರನ್ನು ಅಕ್ಟೋಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಒಪ್ಪಿಸಿದ್ದಾರೆ.

ರಾಚೇನಹಳ್ಳಿ ಭೂ ಹಗರಣದಲ್ಲಿ ಭಾಗಿಯಾಗಿರುವ ಯಡಿಯೂರಪ್ಪನವರು ಅಕ್ರಮವಾಗಿ ಭೂಮಿಯನ್ನು ಕೊಂಡಿದ್ದೇ, ಸಚಿವರಾಗಿದ್ದಾಗ ಉಚಿತ ಗಣೇಶ ವಿಗ್ರಹಗಳನ್ನು ನೀಡುತ್ತೇನೆಂದು ಆಸೆ ಹುಟ್ಟಿಸಿದ್ದ, ಲಾಡು ಜೊತೆ ವಾಚ್ ಫ್ರೀ ಎಂದು ಹೇಳಿದ್ದ, ಶಿವಾಲಯಗಳಿಗೆ ಗಂಗಾಜಲ ಹಂಚುವ ಉದ್ದೇಶವಿಟ್ಟುಕೊಂಡಿದ್ದ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಂದಲೇ.

ಪರಂಪರಾಗತವಾಗಿ ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡಿಕೊಂಡು ಬಂದಿರುವ ಶೆಟ್ಟಿ ಕುಟುಂಬದ ಕೃಷ್ಣಯ್ಯ ಈಗ ತಮ್ಮ ಜೊತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಎಳೆದುಕೊಂಡು ಹೋಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+