ಹಿಂಬಾಗಿಲಿನಿಂದ ಮಾ.ಮುಂ. ಯಡಿಯೂರಪ್ಪ ಪಲಾಯನ!
ಬೆಂಗಳೂರು,
ಅ. 15 : ಧೀಮಂತ ನಾಯಕನಾಗಿ, ಹೋರಾಟಗಾರನಾಗಿ, ರಾಜ್ಯ ಮುಖ್ಯಮಂತ್ರಿಯಾಗಿ ಕರ್ನಾಟಕದ ಜನತೆಗೆ ಮಾದರಿ ನಾಯಕನಾಗಬೇಕಾಗಿದ್ದ ಯಡಿಯೂರಪ್ಪ ಎಲ್ಲಿದ್ದಾರೆ? ಭ್ರಷ್ಟಾಚಾರ ಕಾಯ್ದೆಯಡಿ ಬಂಧಿತರಾಗಬೇಕಾಗಿರುವ ಯಡಿಯೂರಪ್ಪ ಎಲ್ಲಿದ್ದಾರೆ ಎಂದು ಅವರನ್ನು ಬಂಧಿಸಲು ಬಂದಿರುವ ಪೊಲೀಸರಿಗೇ ತಿಳಿದಿಲ್ಲ! id="toptextpromo">ಬಂಧನದ
ವಾರಂಟ್ ಕೈಯಲ್ಲಿ ಹಿಡಿದು ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸಕ್ಕೆ ಯಡಿಯೂರಪ್ಪನವರನ್ನು ಬಂಧಿಸಲು ಬಂದ ಡಿವೈಎಸ್ಪಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಬರೀ ಕ್ಯಾಮೆರಾ, ಪೆನ್ನು ಪ್ಯಾಡು ಹಿಡಿದ ಮಾಧ್ಯಮದವರು, ರಾಜಕಾರಣಿಗಳು, ಯಡಿಯೂರಪ್ಪ ಬೆಂಬಲಿಗರು. ಯಡಿಯೂರಪ್ಪ ಮಾತ್ರ ನಾಪತ್ತೆ! id='are-slot-1' class='oiad oi-axt oiadv'> id='top-searched-articles'>ಸುತ್ತಮುತ್ತಲೆಲ್ಲ
ಜನರು ನೆರೆದಿದ್ದರೂ ಕೂಡ ಯಾರ ಕಣ್ಣಗೂ ಬೀಳದಂತೆ ಯಡಿಯೂರಪ್ಪ ಪರಾರಿ, ಕ್ಷಮಿಸಿ ಪಲಾಯನ ಮಾಡಿದ್ದಾರೆ. ಅವರು ಎಲ್ಲಿ ಹೋಗಿದ್ದಾರೆ, ಯಾರ ಜೊತೆ ಹೋಗಿದ್ದಾರೆ, ಯಾಕೆ ಹೋಗಿದ್ದಾರೆ? ಎಂಬುದು ಎಲ್ಲರ ಕುತೂಹಲದ ವಿಷಯವಾಗಿದೆ. ಪೊಲೀಸರಂತೂ ಕಕ್ಕಾಬಿಕ್ಕಿಯಾಗಿದ್ದಾರೆ. ಕಾರಣ ಹೀಗಿರಬಹುದೆ?











Click it and Unblock the Notifications