ಯಡಿಯೂರಪ್ಪ ಜೈಲಿಗೆ ಹೋಗ್ತಾರಾ, ತಪ್ಪಿಸ್ಕೋತಾರಾ?

ಆದರೆ... ವಕೀಲ ಸಿರಾಜಿನ್ ಬಾಷಾ ಅವರು ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಸಿದಾಗಿನಿಂದ, ಕೋರ್ಟ್ ಸಮನ್ಸ್ ಜಾರಿಯಾದಂದಿನಿಂದ, ಜಾಮೀನು ಅರ್ಜಿ ವಿಚಾರಣೆಗೆ ಬಂದಾಗಲೆಲ್ಲ, ಅರೆಸ್ಟ್ ಆಗೇ ಆಗ್ತಾರೆ ಎಂಬ ಸಂದೇಹ ಬಂದಾಗಲೆಲ್ಲ ಅವರ ಆರೋಗ್ಯ ತೀವ್ರ ಹದಗೆಡುತ್ತಿದೆ.
ಇಂದು ಕೂಡ ತಮಗೆ ಮೆಟ್ಟಿಲು ಕೂಡ ಏರಲು ಆಗುತ್ತಿಲ್ಲ, ತೀವ್ರ ಬೆನ್ನು ನೋವೆಂದು ಕೋರ್ಟಿಗೆ ಅಫಿಡವಿಟಿ ಸಲ್ಲಿಸಿದ್ದರು. ಯಡಿಯೂರಪ್ಪನವರಿಗೆ ಆರೋಗ್ಯವಿರಲಿ, ಅನಾರೋಗ್ಯವಿರಲಿ, ಕೋರ್ಟಿಗೆ ಬರಲಿ, ಬಿಡಲಿ ತೀರ್ಪು ನೀಡೇನೀಡುವುದಾಗಿ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಹೇಳಿದ್ದರು.
ಸಂಜೆ 4 ಗಂಟೆಯ ಒಳಗಾಗಿ ಯಡಿಯೂರಪ್ಪನವರ ಬಂಧನವಾಗುವ ಸಾಧ್ಯತೆಯಿದೆ. ಅಷ್ಟರೊಳಗಾಗಿ ಮಾಜಿ ಮುಖ್ಯಮಂತ್ರಿಗಳು ಜೈಲಿನ ಬದಲು ತೀವ್ರ ಅನಾರೋಗ್ಯದಿಂದ ಯಾವುದೇ ಆಸ್ಪತ್ರೆ ಸೇರಿದರೂ ಆಶ್ಚರ್ಯವಿಲ್ಲ.












Click it and Unblock the Notifications