ಸಂಜೆಯೊಳಗೆ ಪರಪ್ಪನ ಅಗ್ರಹಾರಕ್ಕೆ ಯಡಿಯೂರಪ್ಪ
ಬೆಂಗಳೂರು,
ಅ. 15 : ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರವನ್ನು ಗದ್ದುಗೆಯ ಮೇಲೆ ಕೂಡಿಸಿದ ಖ್ಯಾತಿ ಹೊತ್ತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರಪ್ಪನ ಅಗ್ರಹಾರದ ಮುದ್ದೆ ಊಟ ಮಾಡುವುದು ಹೆಚ್ಚೂಕಡಿಮೆ ಖಚಿತವಾಗಿದೆ. id="toptextpromo">ಅರಕೆರೆ,
ಉತ್ತರಹಳ್ಳಿ ಡಿನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಜಗದೀಶ್ ನಾಯ್ಡು ಜೊತೆಗೆ ಜೈಲುಕೋಣೆ ಹಂಚಿಕೊಳ್ಳವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಲೋಕಾಯುಕ್ತ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಅವರ ಜಾಮೀನು ಅರ್ಜಿ ನಿರಾಕರಿಸಿದ್ದು, ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. id='are-slot-1' class='oiad oi-axt oiadv'> id='top-searched-articles'>ಈ
ವಿರೋಧಿಗಳಿಗೆ ನಿರೀಕ್ಷಿತ ಅಥವಾ ಬಿಜೆಪಿಗೆ ಅನಿರೀಕ್ಷಿತವಾಗಿದ್ದ ಬೆಳವಣಿಗೆಯಿಂದಾಗಿ ಸಂತಸದ ಮತ್ತು ದುಃಖದ ವಾತಾವರಣ ಸೃಷ್ಟಿಯಾಗಿದೆ. ತಮಗೆ ಜಾಮೀನು ಸಿಕ್ಕೇಸಿಗುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸುತ್ತಲೇ ಬಂದಿದ್ದ ಯಡಿಯೂರಪ್ಪನವರ ಮೇಲೆ ಆಕಾಶವೇ ಕಳಚಿಬಿದ್ದಂತಾಗಿದೆ.











Click it and Unblock the Notifications