ಸಂಪುಟ ಸಭೆಯಲ್ಲಿ ಯಡಿಯೂರಪ್ಪ ಪರ-ವಿರೋಧಿ ಬಣಗಳ ವಾಕ್ಸಮರ
ಬೆಂಗಳೂರು,
ಅ.14: ರಾಜ್ಯ ಬಿಜೆಪಿಯಲ್ಲಿ ಇನ್ನೂ ತಮ್ಮ ಹಿಡಿತ ಸಾಧಿಸಿರುವ ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳುವ ಸಲುವಾಗಿಯೇ ಲೋಕಾಯುಕ್ತ ವರದಿಯನ್ನು ಬಹುತೇಕ ತರಿಸ್ಕರಿಸಲಾಗಿದೆ ಎಂಬುದು ಈಗ ಗುಪ್ತವಾಗೇನೂ ಉಳಿದಿಲ್ಲ. ಸಂಪುಟ ಸಭೆಯ ಒಂದು ಹಂತದಲ್ಲಿ ಯಡಿಯೂರಪ್ಪ ಬಣದ ಸದಸ್ಯರು ಕೂಡಲೇ ವರದಿ ತಿರಸ್ಕರಿಸಿ ನಿರ್ಣಯ ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದರು. id="toptextpromo">ಲೋಕಾಯುಕ್ತ
ವರದಿ ಒಪ್ಪಿಕೊಂಡರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕಷ್ಟವಾಗುತ್ತದೆ. ತಮ್ಮ ನಾಯಕರಾಗಿರುವ ಯಡಿಯೂರಪ್ಪ ಅವರಿಗೂ ತೊಂದರೆಯಾಗುತ್ತದೆ. ಆದ್ದರಿಂದ ವರದಿಯನ್ನು ತಕ್ಷಣವೇ ತಿರಸ್ಕರಿಸಬೇಕು ಎಂಬ ಒತ್ತಾಯವನ್ನು ಯಡಿಯೂರಪ್ಪ ಬಣ ಮುಂದಿಟ್ಟಿತ್ತು ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>'2000ನೇ
ಇಸವಿ ಜನವರಿ 1ರಿಂದಲೂ ನಡೆದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಸೂಚಿಸಲಾಗಿತ್ತು. ಆದರೆ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ತನಿಖಾ ವರದಿಯಲ್ಲಿ ಹೆಚ್ಚಿನ ಪ್ರಸ್ತಾಪವೇ ಇಲ್ಲ. ಬಿಜೆಪಿ ಸರ್ಕಾರವನ್ನೇ ಗುರಿಯಾಗಿಸಿಕೊಂಡು ವರದಿ ನೀಡಿದಂತಿದೆ' ಎಂದು ಯಡಿಯೂರಪ್ಪ ಬಣದ ಕೆಲ ಸಚಿವರು ಹೇಳಿದರೆಂದು ಮೂಲಗಳು ತಿಳಿಸಿವೆ.











Click it and Unblock the Notifications