ರಹಸ್ಯವಾಗಿ ನುಸುಳಿದ ಲೋಕಾಯುಕ್ತ ವರದಿ: ಸಂಪುಟ ಸಭೆಯಲ್ಲಿ ರಾದ್ದಾಂತ

mining-report-state-cabinet-divided
ಬೆಂಗಳೂರು, ಅ.14: ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತರು ಸಲ್ಲಿಸಿರುವ ವರದಿ ಕುರಿತು ತೀರ್ಮಾನ ಕೈಗೊಳ್ಳುವ ಸಂಬಂಧ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿಯ ಎರಡು ಬಣಗಳ ನಡುವೆ ತೀವ್ರ ವಾಕ್ಸಮರ ನಡೆದಿದೆ. ರಹಸ್ಯವಾಗಿ ಸಂಪುಟ ಸಭೆಯ ಮುಂದೆ ವಿಷಯ ಮಂಡಿಸಿದ್ದರಿಂದ ಸಿಟ್ಟಿಗೆದ್ದ ಕೆಲ ಸಚಿವರು ಮುಖ್ಯಮಂತ್ರಿಯನ್ನೇ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.

ಲೋಕಾಯುಕ್ತ ವರದಿಯ ಕುರಿತು ಚರ್ಚೆ ನಡೆಸುವ ಪ್ರಸ್ತಾವ ಗುರುವಾರ ಮಧ್ಯಾಹ್ನದವರೆಗೂ ಸಂಪುಟ ಸಭೆಯ ಕಾರ್ಯಸೂಚಿಯಲ್ಲಿ ಇರಲಿಲ್ಲ. ಮುಖ್ಯಮಂತ್ರಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಸಚಿವರಾದ ಜಗದೀಶ ಶೆಟ್ಟರ್, ಆರ್.ಅಶೋಕ, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಕೆಂಡಕಾರಿದ್ದಾರೆ.

'ಲೋಕಾಯುಕ್ತ ವರದಿಯ ಬಗ್ಗೆ ಪೂರ್ವಭಾವಿ ಚರ್ಚೆಯೇ ನಡೆದಿಲ್ಲ. ಅದರಲ್ಲಿ ಏನಿದೆ ಎಂಬುದು ನಮಗೆ ಗೊತ್ತೇ ಇಲ್ಲ. ವಿಷಯವನ್ನು ತಿಳಿಸದೇ ಏಕೆ ಸಂಪುಟ ಸಭೆಯ ಮುಂದೆ ಮಂಡಿಸುತ್ತಿದ್ದೀರಿ' ಎಂದು ಅವರೆಲ್ಲ ಏರು-ಜೋರು ದನಿಯಲ್ಲಿ ಪ್ರಶ್ನಿಸಿದ್ದಾರೆ.

ಬಳಿಕ ಅಡ್ವೊಕೇಟ್ ಜನರಲ್ ನೀಡಿರುವ ವರದಿಯನ್ನು ಆಧರಿಸಿ ಪ್ರಸ್ತಾವ ಮಂಡಿಸಿರುವುದಾಗಿ ಸಮಜಾಯಿಷಿ ನೀಡಲು ಸದಾನಂದ ಗೌಡ ಯತ್ನಿಸಿದರು. ಆದರೆ, ಅದನ್ನು ಒಪ್ಪದ ಶೆಟ್ಟರ್ ಬಣದ ಸದಸ್ಯರು, ಏಕಾಏಕಿ ಲೋಕಾಯುಕ್ತ ವರದಿ ಬಗ್ಗೆ ಚರ್ಚೆ ನಡೆಸಲು ಸಾಧ್ಯವೇ ಇಲ್ಲ ಎಂಬ ಪಟ್ಟು ಹಿಡಿದರು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+