ಸದಾನಂದ ಗೌಡ ನಿಜವಾಗಿಯೂ ಯಡಿಯೂರಪ್ಪ ಕೈಗೊಂಬೆಯೇ: ಶೆಟ್ಟರ್

ಅಧಿಕಾರಿಗಳು ಸಭೆಯಿಂದ ಹೊರಕ್ಕೆ: ಸರ್ಕಾರದಲ್ಲಿನ ಎರಡೂ ಬಣಗಳ ಸಚಿವರ ನಡುವೆ ಇದೇ ವಿಷಯವಾಗಿ 45 ನಿಮಿಷಗಳ ಕಾಲ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಭೆಯಿಂದ ಹೊರಕ್ಕೆ ಕಳುಹಿಸಲಾಗಿತ್ತು.
ಅಂತಿಮವಾಗಿ ಕೆಲ ತಾಂತ್ರಿಕ ವಿಷಯಗಳ ಬಗ್ಗೆ ಲೋಕಾಯುಕ್ತರಿಂದ ಸಲಹೆ ಕೋರುವ ತೀರ್ಮಾನಕ್ಕೆ ಒಪ್ಪಿಗೆ ನೀಡುವಂತೆ ಸದಾನಂದ ಗೌಡ ಅವರು ಶೆಟ್ಟರ್ ಬಣದ ಸದಸ್ಯರನ್ನು ಮನವೊಲಿಸಿದರು ಎನ್ನಲಾಗಿದೆ.
ಶ್ರೀರಾಮುಲು ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿದ ದಿನವೇ ಯಡಿಯೂರಪ್ಪ ಪರ ನಿರ್ಧಾರಕ್ಕೆ ಮುಂದಾಗಿರುವ ಬಗ್ಗೆಯೂ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಒಬ್ಬರ ಪರ ಮತ್ತು ಒಬ್ಬರ ವಿರುದ್ಧ ಏಕೆ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಯವರಿಗೆ ಸಚಿವರು ನೇರವಾಗಿ ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.












Click it and Unblock the Notifications