ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಾಳುಗಳಿಗೆ 'ದರ್ಶನ್ ಹೋದ ಡಾ. ಕೃಷ್ಣ ಬಂದ ಡುಂಡುಂ'

By Srinath
|
Google Oneindia Kannada News

kpsc-krishna-denied-bail-sent-to-jc
ಬೆಂಗಳೂರು, ಅ.14: ಕೆಪಿಎಸ್ ಸಿ ನೇಮಕ ಹಗರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರಾಜ್ಯ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ. ಎಚ್ಎನ್ ಕೃಷ್ಣಗೆ ನ್ಯಾಯಾಲಯ ಜಾಮೀನು ತಿರಸ್ಕರಿಸಿದೆ.

ಕೆಪಿಎಸ್ ಸಿ ನೇಮಕ ಹಗರಣದಲ್ಲಿ ಡಾ. ಎಚ್ ಎನ್ ಕೃಷ್ಣ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ನಗರದ 8ನೆ ಎಸಿಎಂಎಂ ನ್ಯಾಯಾಲಯದ ನ್ಯಾ. ಕಿರಣ್ ಕಿಣಿ ಅವರು ಪ್ರಕರಣದಲ್ಲಿನ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆಯಲ್ಲಿ ಕೃಷ್ಣಗೆ ಜಾಮೀನು ನಿರಾಕರಿಸಿ, ಗುರುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಕೃಷ್ಣ ಅವರ ವಿರುದ್ಧ ಸಿಐಡಿ ಪೊಲೀಸರು ಯಾವುದೇ ಮಹತ್ವದ ಸಾಕ್ಷ್ಯಗಳನ್ನು ನೀಡಿಲ್ಲ. ಅವರ ಮೇಲಿನ ಆರೋಪಗಳು ಗಂಭೀರ ಸ್ವರೂಪದಲ್ಲ. ಜೀವಾವಧಿ ಶಿಕ್ಷೆ ಆಗುವಂತಹ ಯಾವುದೇ ಆರೋಪಗಳು ಇಲ್ಲ. ಈ ಕಾರಣದಿಂದ ಜಾಮೀನು ನೀಡಬೇಕೆಂದು ಕೃಷ್ಣ ಪರ ವಕೀಲ ಹನುಮಂತರಾಯ ಅವರು ವಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಆರುಂಧತಿ 'ಪ್ರಕರಣವು ತನಿಖೆ ಹಂತದಲ್ಲಿರುವ ಕಾರಣ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ಈಗಲೇ ಹೇಳುವುದು ಸರಿಯಲ್ಲ. ಆರೋಪಿಗೆ ಜಾಮೀನು ಕೊಡಬಾರದು ಎಂದು ಮನವಿ ಮಾಡುತ್ತಿದ್ದೇವೆ, ಶಿಕ್ಷೆ ನೀಡಿ ಎಂದು ವಾದಿಸುತ್ತಿಲ್ಲ' ಎಂದರು. ವಾದ ಸರಣಿ ಹೇಗಿತ್ತು ಗೊತ್ತಾ...

English summary
Dr H N Krishna who had resgined recently as Information Commissioner was denied bail and asked to continue stay in Parappana Agrahara jail till Oct 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X