ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಗಣಿಗಾರಿಕೆ:ನ್ಯಾ.ಹೆಗ್ಡೆ ವರದಿ ಬಹುತೇಕ ತಿರಸ್ಕೃತ

By Srinath
|
Google Oneindia Kannada News

illegal-mining-report-state-govt-sends-back-report
ಬೆಂಗಳೂರು, ಅ.14: 'ನಿಷ್ಕಳಂಕ, ಪರಿಶುದ್ಧ ವ್ಯಕ್ತಿಗಳೇ ಇಲ್ಲವೆ ರಾಜ್ಯದಲ್ಲಿ?' ಎಂದು 'ಕನ್ನಡವನ್ಇಂಡಿಯಾ' ನಿನ್ನೆಯಷ್ಟೇ ಕೇಳಿತ್ತು. ಅದಕ್ಕೆ ರಾಜ್ಯ ಸರಕಾರ ತಮ್ಮದೇ ಆದ ಧಾಟಿಯಲ್ಲಿ ಉತ್ತರಿಸಿದೆ. ಅಂಥವರು ಯಾರೂ ನಮಗೆ ಬೇಡವೆಂದು ಸಾರಿದೆ. ಅಷ್ಟೆಲ್ಲ ಕಷ್ಟಪಟ್ಟು ನ್ಯಾ. ಸಂತೋಷ್ ಹೆಗ್ಡೆ ಅವರು ಸಲ್ಲಿಸಿದ್ದ ಅಕ್ರಮ ಗಣಿಗಾರಿಕೆ ವರದಿಯನ್ನು ರಾಜ್ಯ ಸರಕಾರ ಪರೋಕ್ಷವಾಗಿ ತಿರಸ್ಕರಿಸಿದೆ.

ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ವರದಿಗೆ ಸಂಬಂಧಿಸಿದಂತೆ ಮೂರು ತಾಂತ್ರಿಕ ಅಂಶಗಳ ಬಗ್ಗೆ ಲೋಕಾಯುಕ್ತ ಸಂಸ್ಥೆಯಿಂದಲೇ ಸಲಹೆ ಕೋರಲು ಸಚಿವ ಸಂಪುಟ ಸಭೆಯಲ್ಲಿ ಗುರುವಾರ ನಿರ್ಧರಿಸಲಾಗಿದೆ. ವರದಿಯಲ್ಲಿ ಹೆಸರಿಸಿರುವ ಅಧಿಕಾರಿಗಳಿಗೂ ವಿವರಣೆ ನೀಡಲು ಒಂದು ಅವಕಾಶ ಕಲ್ಪಿಸಲೂ ತೀರ್ಮಾನಿಸಲಾಗಿದೆ.

2000ನೇ ಇಸವಿ ಜನವರಿ 1ರಿಂದ 2010ರ ಜುಲೈ 19ರವರೆಗಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಜುಲೈ 27ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಸಚಿವರ ಪದತ್ಯಾಗಕ್ಕೆ ಶಿಫಾರಸು ಮಾಡಿರುವುದು, ಶಿಫಾರಸಿನಲ್ಲಿ ಉಲ್ಲೇಖಿಸಿರುವ ಕಲಂ ಮತ್ತು ಆರೋಪಿಗಳಿಗೆ ವಿವರಣೆ ನೀಡಲು ಅವಕಾಶ ಕಲ್ಪಿಸದೇ ಶಿಫಾರಸು ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಿಂದಲೇ ಸಲಹೆ ಪಡೆಯಲು ನಿರ್ಧರಿಸಲಾಗಿದೆ.

ಸರಕಾರದ ಈ ನಿರ್ಧಾರವನ್ನು ಕಾನೂನು ಸಚಿವ ಎಸ್. ಸುರೇಶ್‌ಕುಮಾರ್ ಅವರ ಬಾಯಲ್ಲಿ ಹೇಳಿಸಿರುವ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು, 'ಲೋಕಾಯುಕ್ತ ವರದಿಯನ್ನು ಸರ್ಕಾರ ಪ್ರಶ್ನಿಸುತ್ತಿಲ್ಲ. ಆದರೆ, ವರದಿಯಲ್ಲಿ ಪ್ರಸ್ತಾಪಿಸಿರುವ ಹಲವು ವಿಷಯಗಳ ಬಗ್ಗೆ ರಾಜ್ಯದ ಅಡ್ವೊಕೇಟ್ ಜನರಲ್ ಮತ್ತು ಇತರೆ ಕಾನೂನು ತಜ್ಞರಿಂದ ಅಭಿಪ್ರಾಯ ಪಡೆಯಲಾಗಿದೆ. ಅವರ ಸಲಹೆಯಂತೆ ಲೋಕಾಯುಕ್ತ ಸಲಹೆ ಕೋರಲಾಗಿದೆ' ಎಂದಿದ್ದಾರೆ.

ಸಂಪುಟ ಸಭೆಯಲ್ಲಿ ವಾಗ್ಯುದ್ಧ: ಸಿಎಂ ತರಾಟೆಗೆ...ಮುಂದೆ ಓದಿ

English summary
Karnataka Govt decided to send back Lokayukta Santosh Hegde illegal mining report on Oct 13. Now, Karnataka Govt seeks suggestion from Lokayukta on illegal mining report,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X