ರಾಷ್ಟ್ರಪತಿಯಾಗಲು ಸಿದ್ಧ : ಎನ್ಆರ್ ನಾರಾಯಣ ಮೂರ್ತಿ

ಇನ್ಫೋಸಿಸ್ ನ ನಿರ್ದೇಶಕ ಮಂಡಳಿಯಿಂದ ನಿವೃತ್ತರಾಗಿರುವ ನಾರಾಯಣ ಮೂರ್ತಿಯವರು ಐಬಿಎನ್-ಲೋಕಮಾತ ಮುಖ್ಯ ಸಂಪಾದಕ ನಿಖಿಲ್ ವಾಗ್ಳೆ ಅವರಿಗೆ ನೀಡಿರುವ ಸಂದರ್ಶನದಲ್ಲಿ, ಭಾರತದ ರಾಷ್ಟ್ರಪತಿಯಾಗುವುದು ಅತ್ಯಂತ ಗರ್ವದ ಸಂಕೇತ. ಆದರೆ ಈ ಬಗ್ಗೆ ಹೆಚ್ಚಿಗೆ ಹೇಳುವುದು ಸಮಂಜಸಕರವಲ್ಲ ಎಂದಿದ್ದಾರೆ.
ದೇಶದಲ್ಲಿ ನನಗಿಂತಲೂ ಹಿರಿಯರಾದ, ರಾಜಕೀಯ ನಿಪುಣರು, ಅಧಿಕಾರ ಚಲಾಯಿಸುವ ತಾಕತ್ತುಳ್ಳವರು ಅನೇಕರಿದ್ದಾರೆ. ಚುನಾವಣೆಗೆ ಇನ್ನೂ 9 ತಿಂಗಳು ಬಾಕಿಯಿರುವುದರಿಂದ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಕಾಲ ಕೂಡಿಬಂದಿಲ್ಲ ಎಂದು ಎನ್ಆರ್ಎನ್ ನುಡಿದಿದ್ದಾರೆ.
ಆದರೆ, ಯುವಜನತೆಯನ್ನು ಪ್ರೇರೇಪಿಸಲು ಅಬ್ದುಲ್ ಕಲಾಂರಂಥ ವ್ಯಕ್ತಿಯೊಬ್ಬರು ಬೇಕೆಂದು ಜನತೆ ಕೇಳುತ್ತಿದ್ದಾರೆ. ಎಲ್ಲ ಪಕ್ಷಗಳು ಒಮ್ಮತ ಸೂಚಿಸಿದರೆ ಒಪ್ಪಿಗೆ ನೀಡುವಿರಾ ಎಂಬ ಪ್ರಶ್ನೆಗೆ, ಅದಕ್ಕಿಂತ ಹೆಮ್ಮೆಯ ವಿಷಯ ಮತ್ತೊಂದಿಲ್ಲ. ದೇಶದ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿ ಮೌಲ್ಯಯುತ ಸೇವೆ ಸಲ್ಲಿಸಲು ತಾವು ಸಿದ್ಧ ಎಂದು ನಾರಾಯಣ ಮೂರ್ತಿ ತಿಳಿಸಿದ್ದಾರೆ.












Click it and Unblock the Notifications