ಮ್ಯಾನ್‌ಹೋಲ್ ಗೆ ಬಿದ್ದ ಬಾಲಕ ಶಿವನ ಪಾದ ಸೇರಿದ

ದೇವರಾಜ್ ಎಂಬವರ ಪುತ್ರ ಮೂರು ವರ್ಷದ ಬಾಲಕ ಲೋಕೇಶ್ ಸಾವಪ್ಪಿದ್ದು, ಬಾಲಕನ ಸಾವಿಗೆ ನರಗಸಭೆಯ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಾಲಕ ಲೋಕೇಶ್ ಕೈಯಲ್ಲಿ ಜೋಳ ಹಿಡಿದು ಆಟವಾಡುತ್ತಿದ್ದ ಸಂದರ್ಭದಲ್ಲಿ ತೆನೆ ಗುಂಡಿಗೆ ಬಿದ್ದಿದೆ. ಅದನ್ನು ಎತ್ತಿಕೊಳ್ಳಲು ಗುಂಡಿಗೆ ಇಳಿದಿದ್ದಾನೆ. ಮಳೆ ನೀರು ಗುಂಡಿಯಲ್ಲಿ ತುಂಬಿಕೊಂಡಿದ್ದರಿಂದ ಮಗು ನೀರಿನಲ್ಲಿ ಮುಳುಗಿ ಸಾವಪ್ಪಿದ್ದಾನೆ.
ಮಗು ನೀರಿಗೆ ಬಿದ್ದಿರುವುದು ಗೊತ್ತಿಲ್ಲದೆ ಊರೆಲ್ಲ ಹುಡುಕಿದ್ದಾರೆ. ನಂತರ ನೀರಿಗೆ ಬಿದ್ದಿರಬಹುದೆಂಬ ಅನುಮಾನದಲ್ಲಿ ನೀರಿನಲ್ಲಿ ಇಳಿದು ನೋಡಿದಾಗ ಬಾಲಕನ ಶವ ಪತ್ತೆಯಾಗಿದೆ.
ಒಳಚರಂಡಿ ಮ್ಯಾನ್‌ಹೋಲ್ ನಿರ್ಮಿಸಲು ತೆಗೆದಿದ್ದ ಗುಂಡಿಯನ್ನು ಮೂರ್ನಾಲ್ಕು ತಿಂಗಳು ಕಳೆದರೂ ಮುಚ್ಚದೆ ಇರುವುದೇ ಈ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.












Click it and Unblock the Notifications