ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಲ್ ನೆಟ್ವರ್ಕ್ ತೊಂದರೆಯಲ್ಲಿ ಬ್ಲ್ಯಾಕ್ ಬೆರ್ರಿ

By Mahesh
|
Google Oneindia Kannada News

BlackBerry outage
ಲಂಡನ್‌/ನ್ಯೂಯಾರ್ಕ್, ಅ.13: ಸತತ ನಾಲ್ಕನೇ ದಿನ ಕೂಡಾ ಬ್ಲ್ಯಾಕ್‌ಬೆರ್ರಿ ಮೊಬೈಲ್‌ ಸೇವೆಯಲ್ಲಿ ದೋಷಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ವಿಶ್ವದಾದ್ಯಂತೆ ಲಕ್ಷಾಂತರ ಗ್ರಾಹಕರು ಅದರಲ್ಲೂ ಅಮೆರಿಕದ ಬ್ಯಾಂಕ್ ಗಳ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.

ಬ್ಲ್ಯಾಕ್‌ಬೆರ್ರಿ ಸ್ಮಾರ್ಟ್ ಫೋನ್ ಗಳಲ್ಲಿ ಇಂಟರ್ನೆಟ್‌ ಬ್ರೌಸ್‌ ಮಾಡಲು ಹಾಗೂ ಸಂದೇಶ ಕಳುಹಿಸಲು ಆಗದೆ ಉಂಟಾಗಿರುವ ಸಮಸ್ಯೆ ಹೇಳತೀರದಾಗಿದೆ.

ನಮ್ಮ ಬೆಂಗಳೂರಿನ ಟ್ರಾಫಿಕ್ ಪೊಲೀಸರ ಗತಿ ಏನಾಗಿದೆ ಗೊತ್ತಿಲ್ಲ. ಬ್ಲ್ಯಾಕ್ ಬೆರ್ರಿ ಹಿಡಿದುಕೊಂಡು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ದಂಡ ಹಾಕಲು ಇದೇ ಸಾಧನವನ್ನು ನಗರದ ಪೊಲೀಸರು ಬಳಸುತ್ತಿದ್ದಾರೆ.

ಭಾರತ, ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ಯುರೋಪ್‌ನಲ್ಲಿ ಬಳಕೆಯಾಗುತ್ತಿರುವ ಬ್ಲ್ಯಾಕ್‌ ಬೆರ್ರಿ ಸೇವೆಯಲ್ಲಿ ನ್ಯೂನತೆ ಕಾಣಿಸಿಕೊಂಡಿದೆ. ಮೊಬೈಲ್‌ ಸೇವೆಯ ಖಾಸಗಿ ಜಾಲದಲ್ಲಿ ತೊಂದರೆ ಉಂಟಾಗಿದೆ. ಇದು 'ನೆಟ್ವರ್ಕ್ ಫೇಲ್ಯೂರ್' ಎಂದು ಬ್ಲ್ಯಾಕ್‌ಬೆರ್ರಿ ಸೇವೆ ಒದಗಿಸುವ ರಿಸರ್ಚ್‌ ಇನ್‌ ಮೋಷನ್‌ ಕಂಪನಿ ಹೇಳಿದೆ.

ಆದರೆ ಬ್ಲ್ಯಾಕ್ ಬೆರ್ರಿಗೆ ಒಂದು ಸಣ್ಣ ತೊಂದರೆಯನ್ನು ಬಗೆಹರಿಸಲು ಇಷ್ಟು ದಿವಸ ಬೇಕೆ ಎಂಬುದು ಗ್ರಾಹಕರ ಪ್ರಶ್ನೆ. ಅಲ್ಲದೆ ಅನೇಕ ಸಾರಿ ಈ ರೀತಿ ಕಿರಿಕಿರಿ, ಮೊಬೈಲ್ ಸುರಕ್ಷತೆಗೆ ಧಕ್ಕೆ ಉಂಟಾದರೂ ಕಂಪನಿ ಎಚ್ಚೆತ್ತುಕೊಂಡಿಲ್ಲ

ಆ್ಯಪಲ್‌, ಆಂಡ್ರಾಯ್ಡ್ ಹಾಗೂ ಸ್ಯಾಮ್‌ಸಂಗ್‌ ಜೊತೆಗೆ ವಿಂಡೋಸ್ ಫೋನ್ ಕೂಡಾ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡುತ್ತಿರುವ ಕಾಲದಲ್ಲಿ ರಿಸರ್ಚ್‌ ಇನ್‌ ಮೋಷನ್‌ಗೆ ಈ ಕಿರಿಕಿರಿ ಭಾರಿ ಹೊಡೆತ ನೀಡುವ ಸಾಧ್ಯತೆಯಿದೆ.

English summary
BlackBerry users across the globe have been dealing with internet and texting issues. Research in Motion is trying to restore the services and apologizes to its customers. The disruption in service frustrating Banks in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X