ರಿಯಲ್ ಎಸ್ಟೆಟ್ ಕಾಳಗ: ಹಾಡಹಗಲೇ ತುಮಕೂರಿನಲ್ಲೂ ಬಿತ್ತು ಹೆಣ

ಶಿರಾ ಗೇಟ್‌ನಿಂದ ಕೇವಲ 150 ಮೀ. ಅಂತರದಲ್ಲಿ ವ್ಯಕ್ತಿಯೊಬ್ಬನನ್ನು ಜನನಿಬಿಡ 80 ಅಡಿ ರಸ್ತೆಯಲ್ಲಿಯೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವುದು ನಾಗರೀಕರನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ನಡೆಯುತ್ತಿದ್ದ ಹಗಲು ಹೊತ್ತಿನ ಸಿನಿಮೀಯ ರೀತಿಯ ಕೊಲೆಗಳು (ತಾಜಾ ಆಗಿ ಕಾರ್ಪೊರೇಟರ್ ನಟರಾಜ್ ಹತ್ಯೆ) ತುಮಕೂರಿನಲ್ಲಿ ನಡೆಯುತ್ತಿರುವುದು ನಾಗರೀಕರಿಗೆ ಆತಂಕ ಮೂಡಿಸಿದೆ.
ಕೊಲೆಯಾಗಿರುವ ನರಸಿಂಹಮೂರ್ತಿ ಮೂಲತಃ ಊರುಕೆರೆಯವರು. ಕೆಲವು ವರ್ಷಗಳಿಂದ ನಗರದ ಅರಳೀಮರದ ಪಾಳ್ಯದಲ್ಲಿ ವಾಸವಾಗಿದ್ದುಕೊಂಡು ರಿಯಲ್ ಎಸ್ಟೇಟ್, ವಾಹನ ಮಾರಾಟ ಹಾಗೂ ಬಡ್ಡಿ ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ.
ಈ ಕೊಲೆಗೆ ರಿಯಲ್ ಎಸ್ಟೇಟ್ ಹಾಗೂ ಭೂ ವಿವಾದವೇ ಕಾರಣವೆಂದು ಶಂಕಿಸಲಾಗಿದೆ. ಈತ ಬಿಜೆಪಿ ಕಾರ್ಯಕರ್ತನೂ ಆಗಿದ್ದನೆಂದು ತಿಳದು ಬಂದಿದೆ. ಸುದ್ದಿ ತಿಳಿದ ಕೂಡಲೇ ನಗರ ಡಿವೈಎಸ್‌ಪಿ ವಿಜಯಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಸಹ ಪರಿಶೀಲನೆ ನಡೆಸಿದರು.












Click it and Unblock the Notifications