ವೈದ್ಯರ ನಿರ್ಲಕ್ಷ್ಯ : ಯಾದಗಿರಿಯಲ್ಲಿ 7 ಮಕ್ಕಳ ತಾಯಿ ನಿಧನ

Mother of 7 dies in Yadgir
ಯಾದಗಿರಿ, ಅ. 11 : ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ಬಂದಿದ್ದ 7 ಮಕ್ಕಳ ತಾಯಿಯೊಬ್ಬಳು ವೈದ್ಯರ ನಿರ್ಲಕ್ಷ್ಯದಿಂದ ಅಸುನೀಗಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಡೆದಿದೆ. ಈಗ ಆ ಏಳು ಮಕ್ಕಳೂ ಅನಾಥವಾಗಿವೆ.

ಅಮರೆಮ್ಮ(31) 2 ತಿಂಗಳ ಹಿಂದೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಅವಳಿ-ಜವಳಿ ಮಗುವಿಗೆ ಜನ್ಮ ನೀಡಿದ್ದಳು. ಮಕ್ಕಳು ಸಾಕು ಎಂದು ಸಂತಾನಹರಣ ಶಸ್ತ್ರ ಚಿಕಿತ್ಸೆಗಾಗಿ ಬಂದಿದ್ದಳು. ಆಕೆಗೆ ತುರ್ತು ಚಿಕಿತ್ಸೆಗಾಗಿ ಗುಲ್ಬರ್ಗಾ ಆಸ್ಪತ್ರೆಗೆ ಸಾಗಿಸಲು ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಚೌದ್ರಿ ಹೇಳಿದ್ದರು.

ಗುಲ್ಬರ್ಗಾಕ್ಕೆ ತೆರಳುವ ಮಾರ್ಗಮಧ್ಯೆ ಅಮರೆಮ್ಮ ಸಾವನ್ನಪ್ಪಿದ್ದಾಳೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಅಮರೆಮ್ಮನ ಮನೆಯವರು ರೊಚ್ಚಿಗೆದ್ದು ಸುರಪುರದ ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದರು.

ವೈದ್ಯರ ಮುಷ್ಕರ ರೋಗಿಗಳ ಪರದಾಟ : ಅ. 1ರಂದು ಶಹಪೂರ ತಾಲೂಕಿನ ರತ್ನಾಳ ಗ್ರಾಮದ ವೃದ್ಧೆಯೋರ್ವಳನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಕೋಪಗೊಂಡ ವೃದ್ದೆಯ ಸಂಬಂಧಿಕರಲ್ಲೊಬ್ಬರಾದ ಸಾಯಿನಾಥ ಎನ್ನುವರು ವೈದ್ಯ ಅನೀಲಕುಮಾರ ಬಣಗಾರ ಎನ್ನುವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

ಯಾದಗಿರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು. ತಮಗೆ ನ್ಯಾಯ ದೊಕಿಸಿಕೊಡುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಘಟನೆ ನಡೆದ ಬಗ್ಗೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾದರೂ, ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಇದನ್ನು ವಿರೋಧಿಸಿ ವೈದ್ಯರು ಮುಷ್ಕರಕ್ಕಿಳಿದಿದ್ದಾರೆ. ರೋಗಿಗಳು ಮಾತ್ರ ಪರದಾಡುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+