RSSಗೆ ಕಿರಿಕಿರಿಯಾಗುತ್ತಿರುವ ಮೋದಿ ಮಹೋದಯ್

ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಮೋದಿಯನ್ನು ಬಿಂಬಿಸಲು RSS ಉತ್ಸುಕವಾಗಿದ್ದರೂ RSSಗೆ ಮೋದಿ ಮಣೆ ಹಾಕುತ್ತಿಲ್ಲ. ಈ ಬೆಳವಣಿಗೆಗೆಳ್ನು ಸೂಚ್ಯವಾಗಿ ಮೋದಿ ಗಮನಕ್ಕೂ ತಂದಿದೆ. ತನ್ಮೂಲಕ, ಸಂಘಟನೆಯ ಅಧಿಕಾರವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಸಿದೆ.
ಅಸಲಿಗೆ ಇತ್ತೀಚೆಗೆ ಮೋದಿ ಸದ್ಭಾವನೆ ಉಪವಾಸ ವ್ರತ ಕೈಗೊಳ್ಳುವ ಮುನ್ನ ಸೌಜನ್ಯಕ್ಕೂ ಆ ಬಗ್ಗೆ ಸಂಘ ಪರಿವಾರಿಗಳ ಜತೆ ಚರ್ಚಿಸಿಲ್ಲ. ಅದಾದ ನಂತರ ಅಡ್ವಾಣಿಯ ಜನಚೇತನ ಯಾತ್ರೆಗೆ ತೊಡಕಾಗಿರುವುದೂ 'ಸಂಘ'ಟಕರಿಗೆ ನುಂಗಲಾರದ ತುತ್ತಾಗಿದೆ.
ವಾಸ್ತವವಾಗಿ, ಅಡ್ವಾಣಿ ಯಾತ್ರೆ ಗುಜರಾತಿನಿಂದ ಆರಂಭವಾಗಬೇಕಿತ್ತು. ಆದರೆ ಮೋದಿ ವಿಮುಖರಾದ್ದರಿಂದ ಯಾತ್ರೆಗೆ ಬಿಹಾರದಿಂದ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಸಂಘಟನೆಗೆ ಸಂಬಂಧಪಟ್ಟಂತೆ ಗುಜರಾತಿನಲ್ಲಿ ಏನೇ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದರೂ ಮೊದಲು ಆ ನಿರ್ಣಯಗಳನ್ನು ಮೋದಿ ಅನುಮೋದಿಸುವುದು ಅನಿವಾರ್ಯ ಎಂಬಂತಾಗಿದೆ.
ಈ ಮಧ್ಯೆ, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಗೆ ಗೈರುಹಾಜರಾಗುವ ಮೂಲಕ ಉದ್ದಟತನ ತೋರಿರುವುದು RSSಗೆ ಬೇಸರವನ್ನುಂಟುಮಾಡಿದೆ. ಇದಕ್ಕೆ ಮೋದಿ ವಿರೋಧಿ ಸಂಜಯ್ ಜೋಶಿಗೆ RSS ಮಣೆ ಹಾಕಿದ್ದೂ ಕಾರಣವಾಗಿದೆ.












Click it and Unblock the Notifications