ಮೋದಿಯನ್ನು ತರಾಟೆಗೆ ತೆಗೆದುಕೊಂಡ ಆರ್ಎಸ್ಎಸ್

ತಾವು ಸಂಘಟನೆಗಿಂತ ದೊಡ್ಡವರಲ್ಲ. ಹಿರಿಯ ನಾಯಕ ಎಲ್ ಕೆ. ಅಡ್ವಾಣಿ ಜತೆ ಶೀತಲಸಮರಕ್ಕೆ ಮುಂದಾದರೆ ರಾಷ್ಟ್ರೀಯ ಸ್ತರದಲ್ಲಿ ಭಾರಿ ಪೆಟ್ಟು ತಿನ್ನಲಿದ್ದೀರಿ ಎಂದು ಆರ್ಎಸ್ಎಸ್ ಎಚ್ಚರಿಸಿರುವುದಾಗಿ ಮೂಲಗಳು ತಿಳಿಸಿವೆ.
ಇದೇ ವೇಳೆ, ಮೋದಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬಿಜೆಪಿಯ ವರಿಷ್ಠರನ್ನು ಗಣನೆಗೆ ತೆಗೆದುಕೊಳ್ಳದಿರುವ ಬಗ್ಗೆಯೂ ಆರ್ಎಸ್ಎಸ್ ಅಸಮಾಧಾನ ತೋರಿದೆ.
ಈ ಹಿಮ್ಮೇಳದಲ್ಲಿ ಅಡ್ವಾಣಿಯವರ ಜನಚೇತನ ಯಾತ್ರೆ ಗುಜರಾತ್ ರಾಜ್ಯದೊಳಕ್ಕೆ ಪ್ರವೇಶಿಸುವಾಗ ಅದಕ್ಕೆ ಪ್ರತಿರೋಧವೊಡ್ಡುವುದಾಗಲಿ ಅಥವಾ ಮಾಧ್ಯಮಗಳ ಮೂಲಕ ಕೊಂಕು ನುಡಿಯುವುದಾಗಲಿ ಮಾಡಬಾರದು ಎಂದು ಆರ್ಎಸ್ಎಸ್ ಸೂಚಿಸಿದೆ.












Click it and Unblock the Notifications