ಹಿಂದೂಗಳೇ ಮತಾಂತರಕ್ಕೆ ಒಳಗಾಗದಿರಿ, ಶೋಭಾ

Minister Shobha Karandlaje
ಬೆಂಗಳೂರು ಅ 10: ಹಿಂದೂಗಳು ಬಣ್ಣಬಣ್ಣದ ಆಮಿಷಕ್ಕೆ ಒಳಗಾಗಬಾರದು. ಇಂತಹ ಆಮಿಷಕ್ಕೆ ಮಾರು ಹೋಗದಿರಿ. ಹಿಂದೂಗಳು ಅನ್ಯಧರ್ಮಕ್ಕೆ ಮತಾಂತರ ಗೊಳ್ಳುವುದು ನಿಲ್ಲಬೇಕೆಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

ಕರಾವಳಿ ಮತ್ತು ಕೇರಳ ಪ್ರದೇಶಗಳಲ್ಲಿ ಮತಾಂತರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಬೇರೆ ಧರ್ಮದವರು ನೀಡುವ ಬಣ್ಣಬಣ್ಣದ ಆಮಿಷಕ್ಕೆ ಒಳಗಾಗಿ ಹಿಂದೂಗಳು ಕನ್ವರ್ಟ್ ಆಗುತ್ತಿರುವುದು ಹೆಚ್ಚಾಗಿದೆ. ಇಂತಹ ಕೆಲಸಕ್ಕೆ ಕೈ ಹಾಕುವವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಶೋಭಾ ಎಚ್ಚರಿಸಿದ್ದಾರೆ.

ಆರ್ಯ ಈಡಿಗ ಸಮಾಜ ಮತ್ತು ಮಾರುತಿ ಕೃಪಾ ಪೋಷಿತ ನಾಟಕ ಮಂಡಳಿ ಏರ್ಪಡಿಸಿದ್ದ ಪೌರಾಣಿಕ ನಾಟಕ ಉದ್ಘಾಟಿಸಿ ಮಾತನಾಡುತ್ತಿದ್ದ ಶೋಭಾ, ಮತಾಂತರ ಎನ್ನುವುದು ಒಂದು ಸಾಮಾಜಿಕ ಪಿಡುಕು, ಯಾವುದೇ ಆಮಿಷಕ್ಕೆ ಒಳಗಾಗದೆ ಹಿಂದೂಗಳು ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ. ದೃಶ್ಯ ಮಾಧ್ಯಮಗಳ ಪ್ರಭಾವದಿಂದ ನಾಟಕಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಕೆಟ್ಟ ಕೆಲಸಗಳಿಗೆ ಪಚೋದಿಸುವಂತ ದೃಶ್ಯಗಳು ಟಿವಿಗಳಲ್ಲಿ ಬಿತ್ತರವಾಗುತ್ತಿದೆ. ಪೋಷಕರು ಅಂತಹ ದೃಶ್ಯಗಳಿಂದ ಮಕ್ಕಳನ್ನು ದೂರವಿದ ಬೇಕೆಂದು ಬೆಂಗಳೂರು ಮಹಾನಗರ ಪಾಲಿಕೆ ಉಪಮೇಯರ್ ಹರೀಶ್ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+