ಮೆಟ್ರೋ ರೈಲು ವಾಸ್ತು ಹೇಳಿದಂತೆ ಚಲಿಸಲಿ

BMRCL Metro and Vastu
ಬೆಂಗಳೂರು. ಅ.10: ಪೂರ್ವಾಭಿಮುಖವಾಗಿ ಇರಲಿ ವೇದಿಕೆ, ಇಷ್ಟು ಕೋನದಲ್ಲೇ ಇರಲಿ ಸೀಟುಗಳು, ಟ್ರೈನ್ ಎಷ್ಟು ಗಂಟೆಗೆ ಸ್ಟಾರ್ಟ್ ಆಗಲಿ ಎಲ್ಲಾ ನಮ್ಮ ವಾಸ್ತು ಪಂಡಿತರು ಹೇಳಿದಂತೆ ಆಗಲಿ ಆಯ್ತ ಎಂದು ಮುಖ್ಯಮಂತ್ರಿ ಸದಾನಂದ ಗೌಡರು ಹೇಳುತ್ತಿದ್ದರೆ ಮೆಟ್ರೋ ಅಧಿಕಾರಿಗಳು ಕಣ್ ಕಣ್ ಬಿಟ್ಟು ನೋಡುತ್ತಿದ್ದರು.

ಅ.20ರಂದು ನಮ್ಮ ಮೆಟ್ರೋ ವಾಣಿಜ್ಯ ಸಂಚಾರ ಉದ್ಘಾಟನೆ ಸಮಾರಂಭಕ್ಕಾಗಿ ಎಂಜಿ ರಸ್ತೆಯ ಮಾನೆಕ್ ಶಾ ಪರೇಡ್ ಮೈದಾನದಲ್ಲಿ ನಿರ್ಮಾಣವಾಗುತ್ತಿರುವ ವೇದಿಕೆಯನ್ನು ಸಿಎಂ ಸದಾನಂದ ಗೌಡ ಹಾಗೂ ಸಚಿವ ಸುರೇಶ್ ಕುಮಾರ್ ವೀಕ್ಷಿಸಿ ಈ ರೀತಿ ಸಲಹೆ, ಸೂಚನೆಗಳನ್ನು ನೀಡಿದ್ದಾರೆ.

ಮೆಟ್ರೋ ಸಂಚಾರ ವಿಳಂಬಕ್ಕೆ ಇಲ್ಲಿದೆ ಕಾರಣ:
ಮೊದಲೇ ಮೆಟ್ರೋ ಕಾಮಗಾರಿ ವಿಳಂಬ ಧೋರಣೆ ಬಗ್ಗೆ ಜನತೆ ಹಲ್ಲು ಕಡಿಯುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ನಮ್ಮ ಘನ ಸರ್ಕಾರ ಕೂಡಾ ಉರಿವ ಬೆಂಕಿಗೆ ತುಪ್ಪ ಸುರಿದಿದೆ. ಉದ್ಘಾಟನೆಗೆ ಅತಿಥಿಗಳ ಅಲಭ್ಯದ ಕಾರಣ ಜೊತೆಗೆ ವಾಸ್ತು, ಶುಭ ಶಕುನ ನೆಪವೊಡ್ಡಿ ಮಹೂರ್ತವನ್ನು ಮುಂದೂಡುವಲ್ಲಿ ಸರ್ಕಾರ ಮಹತ್ವದ ಪಾತ್ರವಹಿಸಿದೆ.

ಸುಮಾರು ಐದು ಬಾರಿ ಡೆಡ್ ಲೈನ್ ಮಿಸ್ ಆಗಿದ್ದರಿಂದ 300 ಕೋಟಿಗೂ ಅಧಿಕ ನಷ್ಟವಾಗಿದೆ. ಮಾರ್ಚ್ 2010, ಡಿ.31, 2010 ನಂತರ 2011ರಲ್ಲಿ ಏ.4, ಸೆ.15 ಹಾಗೂ 26 ರಂದು ಮಹೂರ್ತ ಫಿಕ್ಸ್ ಆಗಿತ್ತು. ಕೊನೆಗೆ ಅ.20 ರಂದು ಮೆಟ್ರೋ ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿದೆ.

ಪ್ರತಿದಿನದ ವಿಳಂಬದಿಂದ ಕನಿಷ್ಠ ದಿನಕ್ಕೆ 65ಲಕ್ಷ ರೂ ನಷ್ಟವಾಗುತ್ತಿದೆ ಎಂದು ಭಾರತದ ಮೆಟ್ರೋ ತಜ್ಞ ಶ್ರೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಭರ್ಜರಿ ಕಾರ್ಯಕ್ರಮ: ಸುಮಾರು 2.5 ಕೋಟಿ ವೆಚ್ಚದಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ 160 ಸಿಸಿಟಿವಿ ಅಳವಡಿಸಲಾಗುವುದು ಸುಮಾರು 50,000 ಜನ ಸಮಾರಂಭಕ್ಕೆ ಬರುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಪ್ರತಿನಿಧಿ ಆರ್ ಪಿ ಜಗದೀಶ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+