ಮೆಟ್ರೋ ಸ್ಟೇಷನ್ ನಲ್ಲಿ 3 ಸ್ಟಾರ್ ಹೋಟೆಲ್

BMRCL Metro
ಬೆಂಗಳೂರು,ಅ.10: ನಮ್ಮ ಮೆಟ್ರೋ ರೈಲು ಮೊದಲ ವಾಣಿಜ್ಯ ಓಡಾಟಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಮೆಟ್ರೋ ಸ್ಟೇಷನ್ ಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ಬಗ್ಗೆ ಬಿಎಂಆರ್ ಸಿಎಲ್ ತಲೆಕೆಡಿಸಿಕೊಳ್ಳುತ್ತಿದೆ.

ಮೊದಲ ರೀಚ್ ನಲ್ಲಿ ಭೈಯಪ್ಪನ ಹಳ್ಳಿ ಮೆಟ್ರೋ ಸ್ಟೇಷನ್ ಅನ್ನು Community Lifestyle Centre ಆಗಿ ಪರಿವರ್ತಿಸಲು ಚಿಂತಿಸಲಾಗಿದೆ. ದೆಹಲಿಯ ಮೆಟ್ರೋ ಸ್ಟೇಷನ್ ಮಾದರಿಯಲ್ಲಿ 10.15 ಎಕರೆ ಭೂಮಿಯಲ್ಲಿ ಕಟ್ಟಡಗಳು ಮೇಲೇಳಲಿದೆ.

ಸುಮಾರು 601.40 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಕನ್ವೆಷನ್ ಹಾಲ್, ವಸ್ತು ಪ್ರದರ್ಶನ ಕೇಂದ್ರ, 3 ಸ್ಟಾರ್ ಬಿಸಿನೆಸ್ ಹೋಟೆಲ್, ಕಾರ್ಪೊರೇಟ್ ಅತಿಥಿ ಗೃಹಗಳು ಇರಲಿದೆ. ಇವುಗಳ ಜೊತೆಗೆ ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್ಸ್, ಕಾಫಿ ಶಾಪ್ ಹಾಗೂ ಸೂಪರ್ ಮಾರ್ಕೆಟ್ ಇರುತ್ತದೆ.

ಟೆಂಡರ್ ಪ್ರಕ್ರಿಯೆ ಮುಗಿದ ಮೇಲೆ ಕಟ್ಟಡ ವಿನ್ಯಾಸ ಪೂರ್ಣಗೊಳಿಸಲಾಗುವುದು. ಸ್ಥಳೀಯರ ಆದ್ಯತೆಗೆ ಅನುಗುಣವಾಗಿ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎನ್ ಶಿವಶೈಲಮ್ ಹೇಳಿದ್ದಾರೆ.

ಅ.20ರಂದು ಮೆಟ್ರೋ ರೈಲು ಮೊದಲ ಪಯಣದ ಜೊತೆಗೆ ಅನೇಕ ವಾಣಿಜ್ಯ ಅವಕಾಶಗಳು ಹರಿದು ಬರಲಿದೆ. ಮೆಟ್ರೋ ಸ್ಟೇಷನ್ ಗಳು ಸಕಲ ಸೌಲಭ್ಯವುಳ್ಳ ಕೇಂದ್ರಗಳಾಗಿ ಪರಿವರ್ತನೆಗೊಳ್ಳಲಿದೆ ಎಂದು ಶಿವಶೈಲಮ್ ಭರವಸೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+