ಬಿಎಂಆರ್ ಸಿಎಲ್ ಮೆಟ್ರೋಗೆ ಸಿಕ್ತು ಬೆಸ್ಕಾಂ ಬಲ

CM DVS Metro Joyride
ಬೆಂಗಳೂರು, ಅ.10: ವಿದ್ಯುತ್‌ ಕ್ಷಾಮ, ಲೋಡ್ ಶೆಡ್ಡಿಂಗ್ ನಡುವೆ ಕೂಡಾ ನಮ್ಮ ಮೆಟ್ರೋ ಅವಿರತವಾಗಿ ಓಡಲಿದೆ. ಅ.20ರಂದು ಉದ್ಘಾಟನೆಗೊಳ್ಳಲಿರುವ 'ನಮ್ಮ ಮೆಟ್ರೊ' ರೈಲು ಸಂಚಾರಕ್ಕೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು (ಬೆಸ್ಕಾಂ) ಕೇವಲ ಎರಡು ಮೆಗಾವಾಟ್ ವಿದ್ಯುತ್ ಮಾತ್ರ ಪೂರೈಸುತ್ತಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಿ ಮಣಿವಣ್ಣನ್ ಹೇಳಿದ್ದಾರೆ.

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಮೊದಲ ಹಂತದ ಯೋಜನೆಗೆ (42.30 ಕಿ.ಮೀ.) ಒಟ್ಟು 19 ಮೆಗಾವಾಟ್ ವಿದ್ಯುತ್‌ನ ಅವಶ್ಯಕತೆಯಿದೆ. ಆದರೆ, ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ 'ರೀಚ್-1'ಕ್ಕೆ (6.7 ಕಿ.ಮೀ. ಉದ್ದದ ಮಾರ್ಗ) 2 ಮೆಗಾವಾಟ್ ವಿದ್ಯುತ್ ಸಾಕು. ಇಷ್ಟು ವಿದ್ಯುತ್‌ನಿಂದಲೇ ಮೊದಲ ಹಂತದ ಯೋಜನೆಯನ್ನು ನಿರ್ವಹಿಸಬಹುದು ಎಂದು ಪಿ. ಮಣಿವಣ್ಣನ್ ಹೇಳಿದ್ದಾರೆ.

ಐಟಿಪಿಎಲ್‌ ಹಾಗೂ ಹಲವು ಯೋಜನೆಗಳಿಗೆ ನಾವು 10 ಮೆಗಾವಾಟ್‌ವರೆಗೆ ವಿದ್ಯುತ್ ಪೂರೈಸುತ್ತಿದ್ದು, ಬಿಎಂಆರ್ ಸಿಎಲ್ ಗೆ ಎರಡು ಮೆಗಾವಾಟ್ ವಿದ್ಯುತ್ ನೀಡುವುದು ಸಮಸ್ಯೆ ಆಗಲಾರದು. ಮೆಟ್ರೋ ರೈಲು ಸಾರ್ವಜನಿಕ ಸೇವಾ ಯೋಜನೆ. ಪ್ರತಿ ಯೂನಿಟ್‌ಗೆ 5.50 ರೂಪಾಯಿ ದರದಲ್ಲಿಯೇ ವಿದ್ಯುತ್ ಪೂರೈಸುತ್ತಿದ್ದೇವೆ ಎಂದು ಮಣಿವಣ್ಣನ್ ಹೇಳಿದ್ದಾರೆ.

ಅಂಗಡಿಗಳಿಗೆ ಸಬ್ಸಿಡಿ ಇಲ್ಲ: ಮೆಟ್ರೊ ನಿಲ್ದಾಣಗಳಲ್ಲಿ ಸ್ಥಾಪನೆಯಾಗುವ ವಾಣಿಜ್ಯ ಮಳಿಗೆಗಳು ವಾಣಿಜ್ಯ ದರದಲ್ಲಿಯೇ ವಿದ್ಯುತ್ ದರ ಪಾವತಿಸಬೇಕಾಗುತ್ತದೆ. ನಮ್ಮ ಮೆಟ್ರೊ ಯೋಜನೆಗೂ ಮಳಿಗೆಗಳಿಗೂ ಸಂಬಂಧವಿಲ್ಲ ಎಂದು ಮಣಿವಣ್ಣನ್ ಹೇಳಿದ್ದಾರೆ.

ಮೆಟ್ರೋ ಸ್ಟೇಷ್ಟನ್ ನಲ್ಲಿ 3 ಸ್ಟಾರ್ ಹೋಟೆಲ್? ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+