ದಾಂಪತ್ಯದ ಪರಮ ಸುಖ ಕಂಡ ಬೆಂಗಳೂರು ದಂಪತಿ ಆತ್ಮಹತ್ಯೆ !

ಆನಂದ್ ತನ್ನ ಅಪ್ಪ-ಅಮ್ಮನ ಜತೆ ಜಗಳವಾಡಿಕೊಂಡು, ದೂರವಾಗಿದ್ದ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಎಫ್. ಎಕ್ಸ್. ಕೋರ್ಟ್ ಮಾಹಿತಿ ನೀಡಿದ್ದಾರೆ. (ತಪ್ಪದೆ ಇದನ್ನು ಓದಿ).
ದಂಪತಿ ಎರಡು ತಿಂಗಳಿನಿಂದ ಗೋವಾದ ರೆಸಾರ್ಟ್‌ವೊಂದರಲ್ಲಿ ಬೀಡುಬಿಟ್ಟಿದ್ದರು. ಮೂರು ದಿನಗಳ ಹಿಂದಷ್ಟೇ ಪಣಜಿ ಹೊರವಲಯದಲ್ಲಿ ತಮ್ಮ ನಿವಾಸಕ್ಕೆ ಆಗಮಿಸಿದ್ದರು. ಮೂರು ದಿನಗಳಿಂದ ದಂಪತಿ ಹೊರಗೆ ಕಾಣಿಸಿಕೊಂಡಿರಲಿಲ್ಲ.
ಮನೆಯಿಂದ ದುರ್ವಾಸನೆ ಬೀರುತ್ತಿದೆ ಎಂದು ಶನಿವಾರ ಅಕ್ಕಪಕ್ಕದ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ದಂಪತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.
ದಂಪತಿ ಮನೆಯಲ್ಲಿ ಪತ್ರವೊಂದರನ್ನು ಬರೆದಿಟ್ಟಿದ್ದಾರೆ. ನಾವು ಜೀವನದಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಂಪಾದನೆ ಮಾಡಿದೆವು. ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದ್ದೆವು. ಬೇಕಾದ್ದನ್ನೆಲ್ಲಾ ಕೊಂಡು ಜೀವನದಲ್ಲಿ ಎಲ್ಲಾ ರೀತಿಯ ತೃಪ್ತಿ ಅನುಭವಿಸಿದ್ದೇವೆ. ಸುಖದ ಸುಪ್ಪತ್ತಿಗೆ ಸಾಕು ಎನಿಸಿದೆ.
ಅಂತಿಮವಾಗಿ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಹಕ್ಕು ಅವರಿಗೇ ಇರುತ್ತದೆ. ನಾವು ಜೀವನದಲ್ಲಿ ಪೂರ್ಣ ತೃಪ್ತಿ ಹೊಂದಿರುವುದರಿಂದ ಸಾವಿಗೆ ಶರಣಾಗುತ್ತಿದ್ದೇವೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ. ನಮ್ಮ ಪೋಷಕರು ತೀರಾ ವಯಸ್ಕರಾಗಿರುವುದರಿಂದ ಅವರು ಇಲ್ಲಿಗೆ ಬರಲಾರರು.
ಹೀಗಾಗಿ ಯಾರಿಗೂ ತಿಳಿಸದೇ ನಮ್ಮ ಸಾವಿನ ಬಳಿಕ ನಮ್ಮ ದೇಹವನ್ನು ಇಲ್ಲೇ ಅಂತ್ಯಸಂಸ್ಕಾರ ಮಾಡಿ. ಇದಕ್ಕಾಗಿ 10,000 ರೂ. ಇಟ್ಟಿದ್ದೇವೆ ಎಂದು ಪತ್ರದಲ್ಲಿ ಬರೆದಿಟ್ಟಿದ್ದಾರೆ.












Click it and Unblock the Notifications