ಚಂಚಲಗೂಡ ಜೈಲು ರೆಡ್ಡಿಗೆ ಕಾರಾಗೃಹ ಅಲ್ಲ ಸಿಹಿಗೃಹ!
ಹೈದರಾಬಾದ್
ಅ.7: ಅಕ್ರಮ ಗಣಿ ಹಗರಣದಲ್ಲಿ ಸಿಲುಕಿ ಜೈಲುಪಾಲಾಗಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಒಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಕಾರಾಗೃಹ ಸೇರಿದ ನಂತರ ಇದೇ ಮೊದಲ ಬಾರಿ ಸಿಹಿ ಸವಿದಿದ್ದಾರೆ. id="toptextpromo">ವಿಜಯದಶಮಿ
ನಿಮಿತ್ತ ಗುರುವಾರ ಚಂಚಲಗುಡಾ ಜೈಲಿನಲ್ಲಿ ವಿಶೇಷ ಸಿಹಿತಿನಿಸು ಮತ್ತು ಮಾಂಸದೂಟ ಏರ್ಪಡಿಸಲಾಗಿತ್ತು. ರೆಡ್ಡಿದ್ವಯರು ಲಾಡು ಮತ್ತು ಕಾಲು ಕೆಜಿಯಷ್ಟು ಚಿಕನ್ ಕರಿ ಸವಿದರೆಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಜೈಲಿನ
ಮಾಮೂಲಿ ಊಟ ತಿಂದು ಬೇಸತ್ತಿರುವ ಜನಾರ್ದನ ರೆಡ್ಡಿಗೆ ಈ ದಿನ ನೀಡಿದ ಸಿಹಿ ಮತ್ತು ಮಾಂಸದೂಟ ಹಿಡಿಸಿತು ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಜನಾ ರೆಡ್ಡಿ ನ್ಯಾಯಾಂಗ ಬಂಧನ ಅವಧಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಅಕ್ಟೋಬರ್ 17ರವರೆಗೆ ವಿಸ್ತರಿಸಿದೆ.











Click it and Unblock the Notifications