ದರ್ಶನ್‌ಗೆ ಚಿತ್ರಾನ್ನ-ಪಾಯಸ, ರೆಡ್ಡಿಗೆ ಚಿಕನ್ ಕರಿ ನವರಾತ್ರಿ ರುಚಿ

ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲುಪಾಲಾಗಿರುವ ನಟ ತೂಗುದೀಪ ದರ್ಶನ್ ವಿಜಯದಶಮಿ ಹಬ್ಬದಂದು ಸಹ ಕೈದಿಗಳ ಜತೆ ಕಾರಾಗೃಹದಲ್ಲಿ ಪಾಯಸದ ರುಚಿ ಸವಿದಿದ್ದಾರೆ. ದಸರಾ ಹಬ್ಬದ ವಿಶೇಷವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ಹೆಸರು ಬೇಳೆ ಪಾಯಸ ನೀಡಲಾಗಿದ್ದು, ಇದನ್ನು ದರ್ಶನ್ ಕೂಡ ಸವಿದರು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ ದರ್ಶನ್ ಅವರು ತಮ್ಮೊಂದಿಗೆ ಸೆಲ್‌ನಲ್ಲಿರುವ ಕಟ್ಟಾ ಜಗದೀಶ್ ಹಾಗೂ ಇಟಾಸ್ಕಾ ಕಂಪನಿಯ ಎಂಡಿ ಶ್ರೀನಿವಾಸ್ ಜತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ. ಜೈಲಿನ ಕೊಠಡಿಯಲ್ಲಿರುವ ದುರ್ಗಾದೇವಿ, ಗಣೇಶ ಹಾಗೂ ಈಶ್ವರ ಭಾವಚಿತ್ರಗಳಿಗೆ ಶ್ರೀನಿವಾಸ್ ಪೂಜೆ ಸಲ್ಲಿಸಿದರು. ಇದರಲ್ಲಿ ದರ್ಶನ್ ಸಹ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು. ಅತ್ತ ರೆಡ್ಡಿಗೆ ಚಿಕನ್ ಕರಿ, ಲಾಡು!
ಜಾಮೀನು ಅರ್ಜಿ ವಿಚಾರಣೆ ಇಂದು: ಈ ಮಧ್ಯೆ, ಚಿತ್ರನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರ ಹೈಕೋರ್ಟ್ ನಡೆಸಲಿದೆ. ಜಾಮೀನು ಕೋರಿ ದರ್ಶನ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾ. ಬಿ.ವಿ. ಪಿಂಟೊ ರಜಾಕಾಲದ ನ್ಯಾಯ ಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಿದೆ.












Click it and Unblock the Notifications