ಅಡ್ವಾಣಿಗೆ ಆರನೇ ರಥಯಾತ್ರೆ: ಪ್ರತಿ ದಿನ ಏನೆಲ್ಲ ಇರುತ್ತದೆ?

advani-bus-yatra-dailyactivities-details
ನವದೆಹಲಿ, ಅ.7: ಬಿಜೆಪಿಗೆ ಮತ್ತೂಮ್ಮೆ ಅಧಿಕಾರ 'ಕೈ'ಗೆಟುಕಿಸಲು, ತನ್ಮೂಲಕ ಪ್ರಧಾನಿ ಪಟ್ಟ ಅಲಂಕರಿಸಲು ದೇಶವ್ಯಾಪಿ ಯಾತ್ರೆಗೆ ಹೊರಟು ನಿಂತಿರುವ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿಗೆ ಇದು 6ನೇ ಯಾತ್ರೆ. ಅಡ್ವಾಣಿ ಅವರ ಜನನ ನವೆಂಬರ್ 8, 1927 ಕರಾಚಿಯಲ್ಲಿ.

ಇದು ಅಡ್ವಾಣಿ (84) ಕೈಗೊಳ್ಳುತ್ತಿರುವ ಆರನೇ ರಥಯಾತ್ರೆ. ಈ ಮೊದಲು ಅವರು ರಾಮ ರಥ ಯಾತ್ರೆ, ಜನ ಸಂದೇಶ ಯಾತ್ರೆ, ಸ್ವರ್ಣ ಜಯಂತಿ ಯಾತ್ರೆ, ಭಾರತ ಉದಯ ಯಾತ್ರೆ ಮತ್ತು ಭಾರತ ಸುರಕ್ಷಾ ಯಾತ್ರೆಯನ್ನು ಕೈಗೊಂಡಿದ್ದಾರೆ.

ಬಿಹಾರದ ಸಿತಾಬ್‌ದಿಯಾರದಿಂದ ಅಕ್ಟೋಬರ್ 11ರಂದು ಆರಂಭವಾಗುವ ಅಡ್ವಾಣಿ ರಥಯಾತ್ರೆ ನವೆಂಬರ್ 20ರಂದು ದಿಲ್ಲಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಪ್ರತಿ ದಿನ 300 ಕಿಮೀ ನಂತೆ ಒಟ್ಟು 12,000 ಕಿ.ಮೀ. ಸಂಚರಿಸಿ, 18 ರಾಜ್ಯಗಳು ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳನ್ನು ಹಾದುಹೋಗಲಿದೆ.

ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಗೋವಾ ರಾಜ್ಯಗಳು ಮತ್ತು ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೂ ಆಡ್ವಾಣಿ ರಥ ತೆರಳಲಿದೆ.

ಪ್ರತಿ ದಿನ ಬೆಳಗ್ಗೆ 9.00 ಗಂಟೆಗೆ ಅಡ್ವಾಣಿ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಬಳಿಕ ಬೆಳಗ್ಗೆ 10.00 ಗಂಟೆಗೆ ಯಾತ್ರೆ ಆರಂಭವಾಗಿ ರಾತ್ರಿ 10ರ ತನಕ ನಡೆಯಲಿದೆ. ತಾವು ತೆರಳುವ ಮಾರ್ಗದಲ್ಲಿ ರಸ್ತೆ ಬದಿಯ ಸಭೆಗಳಲ್ಲದೆ ಪ್ರತಿ ದಿನ ನಾಲ್ಕು ಸಭೆಗಳಲ್ಲಿ ಅಡ್ವಾಣಿ ಭಾಷಣ ಮಾಡುತ್ತಾರೆ. ಒಂದು ಆಂಬುಲೆನ್ಸ್‌ ಮತ್ತು ಅಂಗರಕ್ಷಕರ ಪಡೆಯ ವಾಹನ ಸೇರಿದಂತೆ 18 ವಾಹನಗಳ ಬೆಂಗಾವಲು ಆಡ್ವಾಣಿ ಅವರ ರಥಕ್ಕೆ ಇರಲಿದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+