ದಸರಾ ಬಲರಾಮ ಪಡೆಯ ಜಂಬುಸವಾರಿಗೆ ತೆರೆ

Mysore Dasara 2011 Jambu Savari ends in Bannimantap
ಮೆರವಣಿಗೆಗೂ ಮುನ್ನ ಬಲರಾಮನಿಗೆ ಅರಮನೆಯ ಬಲಭಾಗದಲ್ಲಿರುವ ರಾಜರ ಖಾಸಗಿ ಅರಮನೆ ಆವರಣದಲ್ಲಿ ವಿಶೇಷ ಕ್ರೇನ್ ಮೂಲಕ ಸುಮಾರು 750ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಕಟ್ಟಲಾಯಿತು.

ಬಳಿಕ ಕುಮ್ನಿ ಆನೆಗಳಾದ ಸರಳ ಹಾಗೂ ಮೇರಿ ಮತ್ತು ಅಶ್ವಪಡೆಯೊಂದಿಗೆ ಬಲರಾಮನನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಉಸ್ತುವಾರಿ ಸಚಿವ ರಾಮದಾಸ್, ಮೇಯರ್ ಪುಷ್ಪಲತಾ ಚಿಕ್ಕಣ್ಣರವರು ನಿಂತಿದ್ದ ಅರಮನೆ ಮುಂಭಾಗದ ವಿಶೇಷ ವೇದಿಕೆಗೆ ಕರೆ ತಂದು ನಿಲ್ಲಿಸುತ್ತಿದ್ದಂತೆಯೇ ಗಜಪಡೆಗಳು ತಮ್ಮ ಸೊಂಡಿಲನೆತ್ತಿ ಗಣ್ಯರಿಗೆ ಗೌರವಸಲ್ಲಿಸಿದವು.

ಇದೇ ಸಂದರ್ಭ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಗಣ್ಯರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭ ಕುಶಾಲತೋಪು ಸಿಡಿಸಲಾಯಿತು. ಬಳಿಕ ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಲ್ಲಿ ತೆರಳಿದ ಬಲರಾಮನಿಗೆ ಮಾರ್ಗದುದ್ದಕ್ಕೂ ಜನ ಭಕ್ತಿಯಿಂದ ನಮಿಸಿ ಗೌರವಿಸಿದರು.

ಮುಂದಿನ ಪುಟದಲ್ಲಿ ಓದಿ: ಜಂಬೂ ಸವಾರಿಯಲ್ಲಿ ಮೇಯರ್ ಪುಷ್ಪಲತಾ ಕುದುರೆ ಸವಾರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+