ದಸರಾಕ್ಕೆ ಮೆರಗು ನೀಡಿದ ಕುಣಿತ, ಸ್ತಬ್ದಚಿತ್ರ....
ಕರ್ನಾಟಕದ
ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುವ ಸ್ತಬ್ದ ಚಿತ್ರ ಹಾಗೂ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಸ್ತಬ್ದ ಚಿತ್ರಗಳ ಪೈಕಿ ಬೆಂಗಳೂರಿನ ಅಭಿವೃದ್ಧಿಯನ್ನು ಸಾರುವ ಮೆಟ್ರೋ ಸ್ತಬ್ದ ಚಿತ್ರ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಕಂಬಾರ್, ಬಾಳಪ್ಪಹುಕ್ಕೇರಿ ಅವರನ್ನೊಳಗೊಂಡ ಚಿತ್ರವನ್ನು ಹೊಂದಿದ ಬೆಳಗಾವಿಯ ಸ್ತಬ್ದ ಚಿತ್ರ ಪ್ರಮುಖ ಆಕರ್ಷಣೆಯಾಗಿತ್ತು. id="toptextpromo">ಇಷ್ಟೇ
ಅಲ್ಲದೇ ಮಹದೇಶ್ವರ ಬೆಟ್ಟದ ಮಹತ್ವ ಸಾರುವ ಚಾಮರಾಜನಗರದ ಸ್ತಬ್ದ ಚಿತ್ರ ಸೇರಿದಂತೆ 30 ಜಿಲ್ಲೆಗಳ ಮಹತ್ವ ಸಾರುವ ಸ್ತಬ್ದ ಚಿತ್ರವಲ್ಲದೆ, ಕಾವೇರಿ ನೀರಾವರಿ ನಿಗಮ, ವಾರ್ತ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬೆಂಗಳೂರು ಕರಗಗಳ ಸ್ತಬ್ದ ಚಿತ್ರಗಳು ದಸರಾಕ್ಕೆ ಮೆರಗು ನೀಡಿದವು. id='are-slot-1' class='oiad oi-axt oiadv'> id='top-searched-articles'>ಅರಮನೆಯಲ್ಲಿರುವ
ಹಲವು ಯುದ್ಧದಲ್ಲಿ ಬಳಕೆಯಾದ ಆರು ಫಿರಂಗಿಗಳು ಜಂಬೂ ಸವಾರಿಗೆ ರಾಜಕಳೆ ನೀಡಿದವು. ಅಲ್ಲದೆ, ಗೊರವ ಕುಣಿತ, ಹುಲಿವೇಶ, ಹಗಲುವೇಷ, ಮರಗಾಲು, ನವಿಲು ಕುಣಿತ, ಕಂಸಾಳೆ, ನಗಾರಿ ನೃತ್ಯ, ಪಟದ ಕುಣಿತ, ಪೂಜಾ ಕುಣಿತ, ಕೊರಗ ಕುಣಿತ, ಕೊಡವ ನೃತ್ಯ ಸೇರಿದಂತೆ ಜಾನಪದ ಕಲಾ ತಂಡಗಳು ಜಂಬೂಸವಾರಿಯಲ್ಲಿ ಭಾಗವಹಿಸುವುದರ ಮೂಲಕ ವೀಕ್ಷಕರನ್ನು ಆಕರ್ಷಿಸಿದವು.











Click it and Unblock the Notifications