ಮುಖದ ಎಡಭಾಗಕ್ಕೆ ಚಪ್ಪಲಿ ತಾಕಿರುವುದು ಸೋಮಣ್ಣಗೆ ಶುಭಶಕುನ
ಬೆಂಗಳೂರು,
ಅ.03: ಇನ್ನೂ ಹೇಳಬೇಕೆಂದರೆ ಮತ್ತೊಬ್ಬ ಜ್ಯೋತಿಷಿ ಟಿ ಎಂ ಕೃಷ್ಣಮೂರ್ತಿ ಪ್ರಕಾರ ಸೋಮಣ್ಣಗೆ ಚಪ್ಪಲಿ ತಾಕಿರುವುದು ಅವರ ಮುಖದ ಎಡಭಾಗಕ್ಕೆ. ಓ ಮೈ ಗಾಡ್! ಅದು ನಿಜಕ್ಕೂ ಶುಭ ಶಕುನವಂತೆ. id="toptextpromo">'ಚಪ್ಪಲಿ
ಸೇವೆ ಮಾಡಿಸಿಕೊಂಡಾತನನ್ನು (ಸಚಿವ ಸೋಮಣ್ಣ) ಜಾಗೃತಗೊಳಿಸಲು ಈ ಘಟನೆ ನಡೆದಿದೆ. ಆ ಕ್ಷಣದಲ್ಲಿ ಸೋಮಣ್ಣನ ಗ್ರಹಗತಿಗಳನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಇದರಿಂದ ಅವರು ಪಾಠ ಕಲಿಯುತ್ತಾರೆ ಮತ್ತು ಅದನ್ನು (ತಪ್ಪನ್ನು) ರಿಪೀಟ್ ಮಾಡುವುದಿಲ್ಲ. ಅವರು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಾರೆ. ಜನರ ಜತೆ ಹೆಚ್ಚೆಚ್ಚು ಬೆರೆಯುತ್ತಾರೆ. ಇದು ಅವರ ಭಾಗ್ಯವೇ ಸರಿ' ಎನ್ನುತ್ತಾರೆ ಜ್ಯೋತಿಷಿ ಕೃಷ್ಣಮೂರ್ತಿ. id='are-slot-1' class='oiad oi-axt oiadv'> id='top-searched-articles'>'ಘಟನೆ
ನಡೆದಾಗ ಶನಿವಾರ 11.35ರಲ್ಲಿ ಚಂದ್ರನು ಅನುರಾಧ ನಕ್ಷತ್ರದಲ್ಲಿದ್ದ. ಶನಿ ಅದರ ಮೇಲೆ ಹಾದುಹೋಗುತ್ತಿದ್ದ ಚಂದ್ರ ಮತ್ತು ಶುಕ್ರ ಗ್ರಹಗಳು ಶನಿ ಗ್ರಹದ ಆಸುಪಾಸಿನಲ್ಲಿತ್ತು. ಆದ್ದರಿಂದ ಸಚಿವರಿಗೆ ಒಳ್ಳೆಯದನ್ನೇ ಮಾಡಲಿದೆ' ಎಂದೂ ಅವರು ಸೇರಿಸುತ್ತಾರೆ.











Click it and Unblock the Notifications