ಇಷ್ಟರಲ್ಲೇ ಸಿಬಿಐನಿಂದ ರೆಡ್ಡಿ ಪತ್ನಿ ಅರುಣಾ ವಿಚಾರಣೆ

ಜನಾರ್ದನ ರೆಡ್ಡಿ ಜಾಮೀನು ಅರ್ಜಿಯನ್ನು ನಾಂಪಲ್ಲಿಯ ಸಿಬಿಐ ನ್ಯಾಯಾಲಯ ಮತ್ತೆ ತಿರಸ್ಕರಿಸಿದ್ದು, ನ್ಯಾಯಾಂಗ ಬಂಧನದ ಅವಧಿತನ್ನು ಅ.17ರ ತನಕ ವಿಸ್ತರಿಸಿದೆ.
ಈ ನಡುವೆ ಜನಾರ್ದನ ರೆಡ್ಡಿ ಪತ್ನಿ ಹೆಸರಲ್ಲಿರುವ ಎಎಂಸಿ ಸಂಸ್ಥೆ ಮೇಲೆ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ. ವಿಚಾರಣೆ ನಡೆಸಲು ರೆಡ್ಡಿ ಕೈಗೆ ಸಿಗದಿರುವ ಕಾರಣ, ರೆಡ್ಡಿ ಪತ್ನಿ ಅರುಣಾ ಅವರನ್ನು ವಿಚಾರಣೆಗೆ ಕರೆಸಿಕೊಳ್ಳುವ ಚಿಂತನೆಯಲ್ಲಿ ಸಿಬಿಐ ತಂಡ ಮುಂದುವರೆದಿದೆ.
ರೆಡ್ಡಿ ಅಪ್ತರಿಗೆ ದಿನವಿಡಿ ರಾಹುಕಾಲ : ರಸುಮಾರು 25 ಜನರುಳ್ಳ ಸಿಬಿಐ ತಂಡದ ಕರ್ನಾಟಕ ವಿಭಾಗದ ಎಸ್ ಪಿ ಸುಬ್ರಮಣ್ಯ ರಾವ್ ಅವರ ನೇತೃತ್ವದಲ್ಲಿ ಬಳ್ಳಾರಿ, ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.
ಗಣಿ ಧಣಿ ರಾಜೇಂದ್ರ ಜೈನ್ ಅವರ ಬೆಂಗಳೂರಿನ ಕಚೇರಿಯಲ್ಲಿ ಸಿಬಿಐ ತಂಡ ಇನ್ನೂ ದಾಖಲೆಗಳನ್ನು ಪರಿಶೀಲಿಸುತ್ತಿದೆ.
ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪನಿ(AMC)ಯಲ್ಲಿ ಮಹತ್ತ್ವದ ದಾಖಲೆಗಳನ್ನು ಸಿಬಿಐ ತಂಡ ವಶಪಡಿಸಿಕೊಂಡಿದೆ.
ನಂತರ ಕೂಡ್ಲಿಗಿ ಶಾಸಕ ಬಿ ನಾಗೇಂದ್ರ ಅವರ ಮನೆ ಮೇಲೂ ದಾಳಿ ನಡೆಸಲಾಗಿದೆ. ಜಿಂದಾಲ್ ಸ್ಟೀಲ್ಸ್ ನ ಮಾನವ ಸಂಪನ್ಮೂಲ ವಿಭಾಗದ ಕಚೇರಿಗೆ ಸಿಬಿಐ ತಂಡ ಭೇಟಿ ನೀಡಿತು.
ಎಎಂಸಿ ಹಾಗೂ ಜಿಂದಾಲ್ ನಡುವೆ ಅಲಿಖಿತ ಮೈತ್ರಿ ಇರುವುದು ಲೋಕಾಯುಕ್ತ ವರದಿಯಲ್ಲೂ ಪ್ರಸ್ತಾಪಿತವಾಗಿದೆ. ಎಎಂಸಿ ಮೂಲಕ ಜಿಂದಾಲ್ ಗೆ 51 ಲಕ್ಷ ಟನ್ ಕಬ್ಬಿಣದ ಅದಿರುವ ರವಾನೆಯಾಗಿರುವ ಮಾಹಿತಿ ಸಿಕ್ಕಿದೆ.
ಸಿಬಿಐನ ಇನ್ನೊಂದು ತಂಡ ಚಿತ್ರದುರ್ಗದ ಅರಣ್ಯಾಧಿಕಾರಿ ಶಿವಪ್ಪ ಅವರ ಮನೆ ಮೇಲೂ ದಾಳಿ ನಡೆಸಿದ್ದಾರೆ.












Click it and Unblock the Notifications