ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಲೇಕಣಿ ಆಧಾರ್ ಗೆ ಟಾಂಗ್ ಕೊಟ್ಟ ಸಿಂಗ್

By Mahesh
|
Google Oneindia Kannada News

Nandan Nilekani
ನವದೆಹಲಿ, ಸೆ.29: ಯಾಕೋ ಯುಪಿಎ ಸರ್ಕಾರಕ್ಕೆ ಸಮಯ ಸರಿ ಇದ್ದಂತೆ ಕಾಣುತ್ತಿಲ್ಲ. ಗೃಹ ಸಚಿವ ಚಿದಂಬರಂ ಮತ್ತು ಹಣಕಾಸು ಸಚಿವ ಪ್ರಣಬ್‌ ಮುಖರ್ಜಿ ಕಿತ್ತಾಟ ಕಣ್ಮುಂದೆ ಇರುವಾಗಲೇ ಸಂಖ್ಯೆ ಪ್ರಾಧಿಕಾರದ ಅಧ್ಯಕ್ಷ ನಂದನ್‌ ನಿಲೇಕಣಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್‌ ಅಹ್ಲುವಾಲಿಯಾ ನಡುವೆ ಜಟಾಪಟಿ ಆರಂಭವಾಗಿದೆ.

ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ನಂದನ್‌ ನಿಲೇಕಣಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್‌ ಅಹ್ಲುವಾಲಿಯಾ ನಡುವೆ ಕದನಕ್ಕೆ ಆಧಾರ್ ಗುರುತಿನ ಚೀಟಿ ಕಾರಣವಾಗಿದೆ.

ನಿಲೇಕಣಿ ನೇತೃತ್ವದ ಪ್ರಾಧಿಕಾರ UIDAI ಯೋಜನೆಗೆ ಬಳಸಿದ ವೆಚ್ಚದ ಲೆಕ್ಕಾಚಾರದ ಪುಟ ತಿರುವಿದ ಅಹ್ಲುವಾಲಿಯಾ, ಸಿಟ್ಟಿಗೆದ್ದಿದ್ದಾರೆ.

ಪ್ರಾಧಿಕಾರದ ಲೆಕ್ಕಾಚಾರದ ಬಗ್ಗೆ ಗಮನ ಇಡಲು ಸ್ವತಂತ್ರ ಸಮಿತಿಯೊಂದನ್ನು ರಚಿಸುವಂತೆ ಸರ್ಕಾರವನ್ನು ಕೋರಿ ಪತ್ರ ಬರೆದಿದ್ದಾರೆ.

10 ಕೋಟಿ ಜನರ ಬೆರಳಚ್ಚು, ಕಣ್ಣಿನ ಸ್ಕ್ಯಾನಿಂಗ್‌ ಮತ್ತು ಫೋಟೋಗಳಿಗಾಗಿ ಪ್ರಾಧಿಕಾರ 3000 ಕೋಟಿ ರೂ. ವೆಚ್ಚ ಮಾಡಿದೆ. ಉಳಿದ 120 ಕೋಟಿ ನಾಗರಿಕರಿಗೆ ಕಾರ್ಡ್‌ ನೀಡಲು ಇನ್ನೂ 15,000 ಕೋಟಿ ರೂ. ಅನುದಾನಕ್ಕೆ ಮನವಿ ಮಾಡಿದೆ. ಇದು ಅನಗತ್ಯ ವೆಚ್ಚ.

ಕಣ್ಣಿನ ಗುಡ್ಡೆ ಸ್ಕ್ಯಾನಿಂಗ್‌ ಮಾಡಿಸುವ ಉದ್ದೇಶ, ಆಧಾರ್ ಗುರುತಿನ ಚೀಟಿ ನೀಡಿಕೆ ಕ್ರಮ ಪಾರದರ್ಶಕವಾಗಿಲ್ಲ.

ರಿಜಿಸ್ಟ್ರಾರ್‌ ಜನರಲ್‌ ಆಫ್ ಇಂಡಿಯಾ ಸಂಸ್ಥೆ ಜನಸಂಖ್ಯೆ ನೋಂದಣಿ ಮಾಡುತ್ತಿದೆ. ಇನ್ನೊಂದೆಡೆ UIDAI ಕೂಡಾ ಇದೇ ರೀತಿ ಕಾರ್ಯ ನಿರ್ವಹಿಸುತ್ತಿದೆ. ಅನಗತ್ಯ ವೆಚ್ಚವಾಗುತ್ತಿದೆ ಎಂದು ದೂರಲಾಗಿದೆ.

ಇದಲ್ಲದೆ ನಿಲೇಕಣಿ ಅಧಾರ್ ಯೋಜನೆಗೆ ಗೃಹ ಇಲಾಖೆ, ಹಣಕಾಸು ಇಲಾಖೆ, ಕಾರ್ಮಿಕ ಇಲಾಖೆ, ಸ್ಥಾಯಿ ಸಮಿತಿ, ಸರ್ಕಾರೇತರ ಸಂಸ್ಥೆಗಳಿಂದಲೂ ವಿರೋಧ ವ್ಯಕ್ತವಾಗಿದೆ.

English summary
Nandan Nilekani-led UIDAI is having tough war with Planning commission. Planning Commission Deputy Chairman Montek Singh Ahluwalia has asked about the cost expenditure of project and financial powers given to UIDAI by the UPA Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X