ಕಳ್ಳ ನೋಟು ಸಾಗಣೆ ಜಾಲದಲ್ಲಿ ಚಿದಂಬರಂ

ಭಾರತದಲ್ಲಿ ಕರೆನ್ಸಿ ನೋಟುಗಳನ್ನು ಮುದ್ರಿಸಲು ಲಂಡನ್‌ನಿಂದ ತರಿಸಲಾಗಿದ್ದ ಪೇಪರ್‌ಗಳನ್ನು, ಪಾಕಿಸ್ತಾನಕ್ಕೆ ಸಾಗಿಸಿ ದೇಶದ್ರೋಹ ಕೃತ್ಯವೆಸಗಿದ್ದಾರೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯಂ ಸ್ವಾಮಿ ಆರೋಪಿಸಿದ್ದಾರೆ.
ಯುಪಿಎ ಸರಕಾರದಲ್ಲಿ ಚಿದಂಬರಂ ಭ್ರಷ್ಟ ಮಂತ್ರಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು ದೇಶದ್ರೋಹಿಯಾಗಿದ್ದಾರೆ. ಅವರು ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ.
ವಿದೇಶಿ ಬ್ಯಾಂಕ್ ಗಳಲ್ಲಿ 50,000 ಕೋಟಿ ರೂಪಾಯಿ ಗಳಿಗೂ ಹೆಚ್ಚಿನ ಠೇವಣಿ ಹೊಂದಿದ್ದಾರೆ ಎಂದು ಇಂದೋರ್‌ನಲ್ಲಿ ನಡೆದ 'ಮೀಟ್ ದಿ ಪ್ರೆಸ್' ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಇದೀಗ ಪಾಕಿಸ್ತಾನದ ಐಎಸ್‌ಐ, ಅದೇ ನೋಟುಗಳನ್ನು ಭಾರತಕ್ಕೆ ಕಳ್ಳಸಾಗಾಣೆ ಮಾಡುತ್ತಿರುವುದರಿಂದ ಭಾರತದ ಆರ್ಥಿಕತೆಗೆ ಮುಳುವಾಗಿದೆ.
2ಜಿ ಹಗರಣದಲ್ಲಿ ಚಿದಂಬರಂ ನಿರ್ದೇಶನದಂತೆ ಮಾಜಿ ಟೆಲಿಕಾ ಸಚಿವ ಎ.ರಾಜಾ ಕಾರ್ಯ ನಿರ್ವಹಿಸಿದ್ದಾರೆ. 2ಜಿ ಹಗರಣದಲ್ಲಿ ಚಿದಂಬರಂ ಪಾತ್ರದ ಬಗ್ಗೆ ಸಿಬಿಐ ಸಂಪೂರ್ಣ ತನಿಖೆ ನಡೆಸಬೇಕು ಎಂದು ಸ್ವಾಮಿ ಒತ್ತಾಯಿಸಿದ್ದಾರೆ.












Click it and Unblock the Notifications