ಪತ್ನಿ ಕೊಂದು ಗಂಗೆಗೆ ಎಸೆದ ಪತ್ನಿ ಪೀಡಕ ವೈದ್ಯ

ದೀನ್ ದಯಾಲ್ ಉಪಾಧ್ಯಾಯ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿರುವ ವಿಭಾಸ್, ತನ್ನ ಪತ್ನಿ ಸುಪ್ರಿಯಾರನ್ನು ಕೊಲೆಗೈದು ಬ್ಯಾಗ್ ನಲ್ಲಿ ತುರುಕಿ, ಉತ್ತರ ಪ್ರದೇಶದ ಗಂಗಾ ತೀರಕ್ಕೆ ಬಂದು ಎಸೆದಿರುವುದು ಪತ್ತೆಯಾಗಿದೆ ಎಂದು ಎಸಿಪಿ ವಿ ರಂಗನಾಥನ್ ಹೇಳಿದ್ದಾರೆ.
ಕೊಲೆಗೆ ಕಾರಣ?: ಪತ್ನಿ ಜೊತೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸರಿಯಾದ ವೇವ್ ಲೆಂಗ್ತ್ ಇರಲಿಲ್ಲ. ಸದಾ ಕಿತ್ತಾಟ ಇರುತ್ತಿತ್ತು ಹಾಗಾಗಿ ಆಕೆಯನ್ನು ಕೊಂದೆ ಎಂದು ಡಾ. ಚಂದ್ರ ಹೇಳುತ್ತಾನೆ.
ಬಿಟೆಕ್ ಮುಗಿಸಿ, ಮ್ಯಾನೇಜ್ಮೆಂಟ್ ಕೋರ್ಸ್ ಓದಿದ್ದ ಸುಪ್ರಿಯಾ ಕಳೆದ ನವೆಂಬರ್ ನಲ್ಲಿ ಜಾರ್ಖಂಡ್ ನಲ್ಲಿ ಡಾ. ಚಂದ್ರರ ಕೈ ಹಿಡಿದಿದ್ದಳು. ಇತ್ತೀಚೆಗೆ ಸುಪ್ರಿಯಾಳಿಗೆ ತಿಂಗಳಿಗೆ 85,000ರು ಸಂಬಳ ಸಿಗುವ ಒಳ್ಳೆ ಉದ್ಯೋಗ ಸಿಕ್ಕಿತ್ತು.
ಆದರೆ, ಪತಿ ಚಂದ್ರ ಆಕೆಯನ್ನು ಕೆಲಸಕ್ಕೆ ಹೋಗಬೇಡ ಎಂದು ಆಗ್ರಹಿಸಿದ್ದ. ಪತ್ನಿಯನ್ನು ಮನಯಿಂದ ಹೊರ ಹಾಕಿ, ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ, ಆಕೆ ಹುಚ್ಚಿ ಎಂದು ಪ್ರೂವ್ ಮಾಡಲು ಯತ್ನಿಸಿದ್ದ. ಸ್ಥಳೀಯ ಹರಿ ನಗರ ಪೊಲೀಸ್ ಠಾಣೆಯಲ್ಲಿ ಇವರಿಬ್ಬರ ಕೌಟುಂಬಿಕ ಕಲಹ ಜಗಳ ಬಿಡುಸುವುದೇ ಕೆಲಸವಾಗಿತ್ತು ಎನ್ನಲಾಗಿದೆ
ಸೆ.24ರಂದು ಜಾರ್ಖಂರ್ಡ್ ನಲ್ಲಿರುವ ತವರು ಮನೆಗೆ ಕರೆ ಮಾಡಿದ್ದ ಸುಪ್ರಿಯಾ, ಆದಷ್ಟು ಬೇಗ ನನ್ನನ್ನು ಚಂದ್ರನಿಂದ ರಕ್ಷಿಸಿ, ಇಲ್ಲದಿದ್ದರೆ ಆತ ನನ್ನನ್ನು ಕೊಲ್ಲುತ್ತಾನೆ ಎಂದಿದ್ದಳು.
ಸುಪ್ರಿಯಾ ತಾಯಿ ನಾಲ್ಕು ಸಮಾಧಾನದ ಮಾತುಗಳನ್ನಾಡಿ ಸುಮ್ಮನಾಗಿದ್ದರು. ಆದರೆ, ಈಗ ಸುಪ್ರಿಯಾ ಅಮಾನುಷವಾಗಿ ಹತ್ಯೆಯಾಗಿದ್ದಾಳೆ.












Click it and Unblock the Notifications