30 ಹೆಂಡಿರ ದುಬೈ ರಾಮಕೃಷ್ಣ ಪೊಲೀಸ್ ಬಲೆಗೆ

ದಕ್ಷಿಣ ಕನ್ನಡ ಜಿಲ್ಲೆಯ ಮೋಹನ್ ಕುಮಾರ್ 20 ಮಂದಿಯನ್ನು ಮದುವೆಯಾಗಿ ಮಜಾ ಉಡಾಯಿಸಿ ನಂತರ ಕೊಲೆ ಮಾಡಿದ್ದುದು ದಾಖಲೆಯಾಗಿತ್ತು. ಅದನ್ನು ದುಬೈ ರಾಮಕೃಷ್ಣ ಅಳಿಸಿ ಹಾಕಿ ಹೊಸ ದಾಖಲೆ ಬರೆದಿದ್ದಾನೆ. ಕರ್ನಾಟಕದ ಮಟ್ಟಿಗೆ ಇದು ಸದ್ಯಕ್ಕೆ ಅಳಿಸಲಾಗದ ದಾಖಲೆ.
ಮಂಗಳೂರಿನ ಮಹಿಳೆ ತನ್ನನ್ನು ಮದುವೆಯಾಗುವುದಾಗಿ ರಾಮಕೃಷ್ಣ ನಂಬಿಸಿ 1.71 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳೆದ ವರ್ಷ ಲಪಟಾಯಿಸಿ ಮೋಸಗೊಳಿಸಿದ್ದಾನೆಂದು ದೂರು ನೀಡಿದ ಹಿನ್ನೆಲೆಯಲ್ಲಿ ಬಂದರು ಠಾಣೆ ಇನ್ಸ್ ಪೆಕ್ಟರ್ ವಿನಯ್ ಗಾಂವ್ಕರ್ ತಂಡ ತನಿಖೆ ಆರಂಭಿಸಿತು.
ರಾಮಕೃಷ್ಣ ಮದುವೆಯಾಗಿ ನಂಬಿಸಿ ಮೋಸಗೊಳಿಸಿದ ಹನ್ನೊಂದು ಪ್ರಕರಣಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಈತ ವಿಧವೆಯರು ಅಥವಾ ಡೈವೊರ್ಸ್ ಆದವರನ್ನು ಮದುವೆಯಾಗುವುದಾಗಿ ಜಾಹೀರಾತು ನೀಡುತ್ತಿದ್ದ. ಈತನ ಜಾಹೀರಾತಿಗೆ ಮರುಳಾಗಿ ಮಹಿಳೆಯರು ಮೋಸ ಹೋಗುತ್ತಿದ್ದರು.
ಮಂಗಳೂರು ಮೂಲದ ಮಹಿಳೆಯೂ ಇದೇ ರೀತಿ ಮೋಸ ಹೋಗಿದ್ದಳು. ರಾಮಕೃಷ್ಣ ತನ್ನ ಪತ್ನಿ ನಿಧನರಾಗಿವುದಾಗಿ ಮಹಿಳೆಯರನ್ನು ನಂಬಿಸುತ್ತಿದ್ದ ಎನ್ನಲಾಗಿದೆ. ಇದೀಗ ಬಹುಪತ್ನಿಯರ ಗಂಡ ರಾಮಕೃಷ್ಣ ಇದೀಗ ಪೊಲೀಸರ ವಶದಲ್ಲಿದ್ದು ಈತನೇ ಬಾಯಿಬಿಟ್ಟರೆ ಇನ್ನಷ್ಟು ಕುಕೃತ್ಯಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ.











Click it and Unblock the Notifications