ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ರಥಯಾತ್ರೆ ರದ್ದು?

|
Google Oneindia Kannada News

BS Yeddyurappa
ಉಡುಪಿ ಸೆ 27: ಅಕ್ಟೋಬರ್ 8ರಿಂದ ರಾಜ್ಯಾದ್ಯಂತ ಬಿಎಸ್ ಯಡಿಯೂರಪ್ಪ ಅವರ ಉದ್ದೇಶಿತ ರಥಯಾತ್ರೆಗೆ ಕರ್ನಾಟಕ ಬಿಜೆಪಿ ಅಡ್ಡಗಾಲು ಹಾಕಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪರ ಕೆಎಸ್ ಈಶ್ವರಪ್ಪ ವಾದಿಸಿದ್ದು ಬಿಟ್ಟರೆ, ಉಳಿದವರು ಈ ಯಾತ್ರೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಈ ನಡೂವೆ ಕೊಲ್ಲೂರಿನಲ್ಲಿ ಸೋಮವಾರ ರಾತ್ರಿ (ಸೆ.26) ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಬಿಎಸ್ವೈ, ರಾಜಕೀಯಕ್ಕೆ ಬಂದಾಗಿನಿಂದಲೂ ಜನರೊಂದಿಗೆ ಇದ್ದು ಹೋರಾಟ ಮಾಡಿದವನು ನಾನು. ಮುಖ್ಯಮಂತ್ರಿ ಪಟ್ಟ ಹೋಯಿತೆಂದು ಮನೆಯಲ್ಲಿ ಕುಳಿತು ಸಮಯ ವ್ಯರ್ಥ ಮಾಡುವವನು ನಾನಲ್ಲ.

ರಾಜ್ಯದ ಮೂಲೆ ಮೂಲೆಗೆ ಸಂಚರಿಸಿ ಪಕ್ಷ ಸಂಘಟನೆ ಮಾಡುವ ಉದ್ದೇಶ ಹೊಂದಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದು ಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಯಡಿಯೂರಪ್ಪ ರಥಯಾತ್ರೆ ನಡೆಸಿದರೆ ಪಕ್ಷಕ್ಕೆ ಅನುಕೂಲಕ್ಕಿಂತ ಹೆಚ್ಚಾಗಿ ಅನಾನುಕೂಲವೇ ಹೆಚ್ಚು. ಯಾತ್ರೆಯ ಬಗ್ಗೆ ಪಕ್ಷದ ಯಾವುದೇ ನಾಯಕರ ಜೊತೆ ಚರ್ಚೆ ನಡೆಸದೆ ಅವರೇ ತೀರ್ಮಾನ ಕೈಗೊಂಡಿರುವುದರಿಂದ ಪಕ್ಷದ ಹೆಚ್ಚಿನ ಮುಖಂಡರು ಯಡಿಯೂರಪ್ಪ ವಿರುದ್ದ ತಿರುಗಿ ಬಿದ್ದಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ರಾಜ್ಯಾದ್ಯಕ್ಷ ಈಶ್ವರಪ್ಪ ಮಂಗಳವಾರ (ಸೆ 27) ಎಲ್ಲಾ ವಿಭಾಗದ ಪ್ರಭಾರಿಗಳ ಸಭೆ ಕರೆದಿದ್ದಾರೆ.

ಕೊಲ್ಲೂರಿನಲ್ಲಿ ಶತ್ರುಬಾಧೆ ನೀಗಿಸಿಕೊಳ್ಳಲು ಯಡಿಯೂರಪ್ಪ ಅವರ ಕುಟುಂಬ ಮಹಾಚಂಡಿಯಾಗ ನಡೆಸಿ, ದೇವಿಯ ಆಶೀರ್ವಾದವನ್ನು ಬೇಡಿದರು.

English summary
Karnataka BJP is yet to decide on BS Yeddyurappa's Rath yatra. But Ex CM Yeddyurappa's family was in Kollur to perform Maha Chandi yaga to seek blessings of diety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X