ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿ ಹಣ ತಿಂದು ಮನೆಗೆ ಹೋದ ಅರಣ್ಯಾಧಿಕಾರಿಗಳು

By * ರೋಹಿಣಿ ಬಳ್ಳಾರಿ
|
Google Oneindia Kannada News

Illegal mining in Karnataka
ಬಳ್ಳಾರಿ, ಸೆ. 24 : ಗಣಿ ಹಗರಣದ ಭಾಗಿಯಾಗಿದ್ದ ಬಳ್ಳಾರಿ ಜಿಲ್ಲೆಯ ಅರಣ್ಯ ಇಲಾಖೆಯ 29 ಸಿಬ್ಬಂದಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆಲ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ಹಿರಿಯ ಅಧಿಕಾರಿಗಳು ಶುಕ್ರವಾರ ಆದೇಶ ಜಾರಿ ಮಾಡಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಆರ್‌ಎಫ್‌ಓಗಳಾದ ಮಹೇಶ್ ಪಾಟೀಲ್, ರಾಮಮೂರ್ತಿ, ವಿ.ಕೆ. ತಿಪ್ಪೇಸ್ವಾಮಿ, ಎಂ. ನ್ಯಾಮ್ತಿ, ನ್ಯಾನ್ಸಿ, ದ್ವಿತೀಯ ದರ್ಜೆ ಸರ್ವೇಯರ್ ದರಫ್ ನಾಯಕ್, ಫಾರೆಸ್ಟರ್‌ಗಳಾದ ಕೆ. ರಂಗೇಗೌಡ, ಬಳ್ಳಾರಿ ರಾಘವೇಂದ್ರ, ಕೆ.ಸಿ. ನಾಗರಾಜಯ್ಯ, ಕೆ.ಆರ್. ಚೌಹ್ಹಾಣ್, ಘಂಟಿ ರಾಜೇಶ್, ಸಯ್ಯದ್ ಷರೀಫ್, ಬಸವನಗೌಡ, ಬಿ. ನಾಗರಾಜ್, ಸುನಿಲ್ ಕುಮಾರ್, ಟಿ.ಕೆ. ಚಂದ್ರಪ್ಪ, ಸಂಜೀವ ಕುಮಾರ್, ಗಂಗೇಗೌಡ, ಫಾರೆಸ್ಟ್ ಗಾರ್ಡ್‌ಗಳಾದ ಕೆ.ಎಂ. ಮಧುಸೂದನ, ಹೊನ್ನೂರಪ್ಪ, ನಾಗಭೂಷಣ್ ಅಮಾನತು ಆದವರು.

ಇವರಲ್ಲದೇ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಎಸ್.ಪಿ. ರಾಜು, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿರ್ ಆಗಿರುವ ಬಸವರಾಜು ಅವರು ಸೇವೆಯಿಂದ ಅಮಾನತುಗೊಂಡಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗೆ ಬೆಂಗಳೂರಿನಿಂದ ಶುಕ್ರವಾರ ಬೆಳಿಗ್ಗೆ ಬಳ್ಳಾರಿಯ ಕಚೇರಿಗೆ ಫ್ಯಾಕ್ಸ್ ಮೂಲಕ ಸಂದೇಶ ರವಾನೆಯಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೊಸಪೇಟೆ ಕಚೇರಿಗೆ ಕೂಡ ಇದೇ ದಿನ ಫ್ಯಾಕ್ಸ್ ಸಂದೇಶ ರವಾನೆಯಾಗಿದೆ ಎಂದು ಹೇಳಲಾಗಿದೆ.

ಚಿಕ್ಕಮಗಳೂರಲ್ಲಿ ಪ್ರಸ್ತುತ ಅರಣ್ಯ ಸಂರಕ್ಷಣಾಧಿಕಾರಿ ಆಗಿರುವ ಮನೋಜ್ ಕುಮಾರ್ ಶುಕ್ಲಾ, ಧಾರವಾಡ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ ಜಿಲ್ಲೆಯ ಅತ್ಯಂತ ವಿವಾದಿತ ಅಧಿಕಾರಿ ಆಗಿದ್ದ ಮುತ್ತಯ್ಯ, ಚಿತ್ರದುಗ೯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸಲು, ಚಿಕ್ಕಮಂಗಳೂರುನಲ್ಲಿರುವ ಡಾ. ರಾಜಶೇಖರನ್, ಎಸಿಎಫ್ ಎಚ್.ಎಲ್. ರಂಗರಾಜು, ಹೊಸಪೇಟೆ ಎಸಿಎಫ್ ಟಿ.ವಿ. ಶ್ರೀನಿವಾಸುಲು, ಬಳ್ಳಾರಿ ಎಸಿಎಫ್ ಶಿವಾನಂದ ಮೂರ್ತಿ ಹಾಗೂ ಕೆ.ಕೆ. ಪೂವಯ್ಯ ಅವರನ್ನು ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ. ಶೀಘ್ರದಲ್ಲೇ ಇವರ ಅಮಾನತು ಆದೇಶ ಜಾರಿ ಆಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.

English summary
Hoard of officials belonging to Karnataka forest and Mines and Geological department have been suspended following their involvement in illegal mining in Karnataka. Recommendation has been made to suspend few more officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X