ನಾನು ಪ್ರಧಾನಿ ಹುದ್ದೆ ರೇಸ್ ನಲ್ಲಿಲ್ಲ: ಸುಷ್ಮಾ

ಎಲ್ ಕೆ ಅಡ್ವಾಣಿ ಅವರು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ ಎಂದು ಹೇಳಿದ ತಕ್ಷಣ ಅವರು ರಾಜಕೀಯ ಸನ್ಯಾಸ ಸ್ವೀಕರಿಸಿದ್ದಾರೆ ಎಂದರ್ಥವಲ್ಲ. ಪಕ್ಷದಲ್ಲಿ ಈಗಲೂ ಅವರಿಗೆ ಉನ್ನತವಾದ ಸ್ಥಾನವಿದೆ. ಗೌರವವಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಮೋದಿ ಮೀಡಿಯಾ ಹೀರೋ: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಮಾಧ್ಯಮಗಳಿಂದ ಬಿಂಬಿತವಾಗಿರುವ ನರೇಂದ್ರ ಮೋದಿ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಮಾಧ್ಯಮಗಳ ವರದಿ ಆಧಾರಿಸಿ ನಾವು ಪ್ರಧಾನಿ ಅಭ್ಯರ್ಥಿ ಸೂಚಿಸಬೇಕಾಗಿಲ್ಲ.
ಮೋದಿ ಅವರ ಸಾಧನೆ, ಅಭಿವೃದ್ಧಿ ಯೋಜನೆಗಳನ್ನು ಅಲ್ಲಗೆಳೆಯುವಂತಿಲ್ಲ. ಆದರೆ, ಮಾಧ್ಯಮಗಳನ್ನು ಒಮ್ಮೆ ಹೀರೋ ಮತ್ತೊಮ್ಮೆ ಜೀರೋ ಮಾಡಿಬಿಡುತ್ತವೆ. ಮಾಧ್ಯಮಗಳ ಬಹು ಪ್ರಚಾರದ ಬಗ್ಗೆ ಮೋದಿ ಕೂಡಾ ಎಚ್ಚರದಿಂದ ಇದ್ದರೆ ಒಳ್ಳೆಯದು ಎಂದು ಸುಷ್ಮಾ ಅಭಿಪ್ರಾಯಪಟ್ಟಿದ್ದಾರೆ.
ಚಿದಂಬರಂ ಹಾಗೂ 2ಜಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುಷ್ಮಾ, ಚಿದಂಬರಂ ಅವರು ತಪ್ಪಿತಸ್ಥರಾದರೆ ತಕ್ಷ ಶಿಕ್ಷೆಯಾಗಲಿದೆ. ಅವರ 2ಜಿ ಹಗರಣದಲ್ಲಿ ಅವರ ಕೈವಾಡ ಇರುವುದು ಕಂಡುಬಂದಿದೆ. ಆರೋಪ ಹೊತ್ತು ಜವಾಬ್ದಾರಿ ಹುದ್ದೆಯಲ್ಲಿ ಮುಂದುವರೆಯುವುದು ಸರಿಯಲ್ಲ ಎಂದಿದ್ದಾರೆ.












Click it and Unblock the Notifications