ಸೂಟ್ ಕೇಸಿನಲ್ಲಿ ಮಹಿಳೆ ಶವ, ಬೆಚ್ಚಿದ ಬೆಂಗ್ಳೂರ್

ಕೊಲೆಯಾದ ಮಹಿಳೆ ಗುರುತು ಇನ್ನೂ ಸಿಕ್ಕಿಲ್ಲ. ಸುಮಾರು 20-25 ವರ್ಷ ವಯಸ್ಸಿನ ಮಹಿಳೆಯಾಗಿದ್ದು, ವಿವಾಹಿತಳಂತೆ ಕಂಡು ಬಂದಿದೆ. ಕೆಂಪೇಗೌಡ ನಗರದ ಅಪ್ಪುರಾವ್ ರಸ್ತೆಗೆ ಸಮಾನಾಂತರವಾಗಿರುವ 6 ನೇ ಅಡ್ಡರಸ್ತೆಯಲ್ಲಿ ಬಳಿ ಮನೆಯೊಂದರ ಕಾಂಪೌಂಡ್ ಪಕ್ಕದಲ್ಲಿ ಶವವಿದ್ದ ಸೂಟ್ ಕೇಸ್ ಪತ್ತೆಯಾಗಿದೆ.
ಬುಧವಾರ ಬೆಳಗ್ಗೆ 7.30ರ ಸುಮಾರಿಗೆ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಟ್ರಾವೆಲಿಂಗ್ ಸೂಟ್ ಕೇಸ್ ಕಂಡು ಸ್ಥಳೀಯರು ಅನುಮಾನದಿಂದ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಟ್ ಕೇಸ್ ತೆರೆದು ನೋಡಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಆದರೆ, ಮೃತ ಮಹಿಳೆ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಕುತ್ತಿಗೆ ಹಿಸುಕಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೆಂಪೇಗೌಡ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ ಎಂದು ಬೆಂಗಳೂರು ದಕ್ಷಿಣ ಡಿಸಿಪಿ ಸೋನಿಯಾ ನಾರಂಗ್ ಹೇಳಿದ್ದಾರೆ.











Click it and Unblock the Notifications