ನಲ್ಲ ಡಿಚ್ ಮಾಡಿದ್ದಕ್ಕೆ ನೇಣು ಹಾಕಿಕೊಂಡ ನಲ್ಲೆ!

ಬಾಯ್ ಫ್ರೆಂಡ್ ನ ಈ ಫೆಸ್ ಬುಕ್ ಸಂದೇಶದಿಂದ ಮನನೊಂದ ಗರ್ಲ್ ಫ್ರೆಂಡ್ ಮಾಲಿನಿ ಮರ್ಮು (22) ತನ್ನ ಹಾಸ್ಟೆಲ್ ರೂಂನಲ್ಲಿ ನೇಣು ಹಾಕಿಕೊಂಡು ಇಹಲೋಕಕ್ಕೆ ಗುಡ್ ಬೈ ಹೇಳಿದ್ದಾಳೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂನಲ್ಲಿ ಎಂಬಿಎ ವಿದ್ಯಾರ್ಥಿನಿಯಾಗಿರುವ ಮಾಲಿನಿ ಜಾರ್ಖಂಡ್ ನ ಜೆಮ್ಶೆಡ್ ಪುರದವಳು.
ಈ ಘಟನೆ ನಡೆದಿರುವುದು ಸೋಮವಾರ. ಅಂದು ಆಕೆ ಯಾವುದೇ ಕ್ಲಾಸಿಗೆ ಬರದಿದ್ದರಿಂದ ಸಹಪಾಠಿಗಳು ಹಾಸ್ಟೆಲ್ ನ 421ನೇ ರೂಮಿಗೆ ಹೋಗಿ ಆಕೆಯನ್ನು ಕೂಗಿ ಕರೆದಿದ್ದಾರೆ. ನಂತರ, ಸಂಶಯ ಬಂದು ಸೆಕ್ಯೂರಿಟಿ ಗಾರ್ಡ್ ನಿಂದ ಬಾಗಿಲು ಒಡೆಸಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದುಬಂದಿದೆ.
ಆತ್ಮಹತ್ಯೆಗೆ ಶರಣಾಗುವ ಮುನ್ನ ಸಾವಿನ ಪತ್ರವನ್ನು ಲ್ಯಾಪ್ ಟಾಪ್ ಮೇಲೆ ಬರೆದಿಟ್ಟು ನೇಣು ಹಾಕಿಕೊಂಡಿದ್ದಾಳೆ. ಡೆತ್ ನೋಟ್ ನಲ್ಲಿ 'ಹಿ ಡಿಚ್ಡ್ ಮಿ' ಎಂದು ಬರೆದಿದ್ದಾಳೆ. ಆಕೆಯ ದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದ್ದು, ಅಂತ್ಯ ಸಂಸ್ಕಾರಕ್ಕಾಗಿ ಆಕೆಯ ಪಾಲಕರ ಬರುವಿಗೆ ಕಾಯಲಾಗುತ್ತಿದೆ.












Click it and Unblock the Notifications