ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿವಿಎಸ್ ಭರವಸೆ : ಉಪವಾಸ ಕೈಬಿಟ್ಟ ಶ್ರೀರಾಮುಲು

By * ರೋಹಿಣಿ ಬಳ್ಳಾರಿ
|
Google Oneindia Kannada News

Sriramulu ends fast
ಬಳ್ಳಾರಿ, ಸೆ. 19 : ಕರ್ನಾಟಕ ಸ್ಪಾಂಜ್ ಐರನ್ ಘಟಕಗಳಿಗೆ ಬೆಂಬಲಿಸಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿಯ ಮುನಿಸಿಪಲ್ ಮೈದಾನದಲ್ಲಿ ಕಳೆದ 2 ದಿನಗಳಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದ ಬೇಡಿಕೆಗಳನ್ನು ಕೊಪ್ಪಳ ವಿಧಾನಸಭಾ ಉಪ ಚುನಾವಣೆಯ ನಂತರ ಈಡೇರಿಸುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಭರವಸೆ ನೀಡಿದ ಕಾರಣ ಸತ್ಯಾಗ್ರಹಕ್ಕೆ ಸೋಮವಾರ ಕೊನೆಹಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮುಲು, ಕೊಪ್ಪಳ ವಿಧಾನಸಭಾ ಉಪ ಚುನಾವಣೆಯ ನಂತರ ಸ್ಪಾಂಜ್ ಐರನ್ ಘಟಕಗಳ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ 6 ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ಪ್ರತಿಭಟನೆ ನಡೆಸುತ್ತಿದ್ದ ಸ್ಪಾಂಜ್ ಐರನ್ ಘಟಕಗಳ ಮಾಲೀಕರು, ಕಾರ್ಮಿಕರು ಮತ್ತು ಅಧಿಕಾರಿಗಳು ಸೋಮವಾರ ಮಧ್ಯಾಹ್ನದಿಂದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಘೋಷಿಸಿದರು.

ಕರ್ನಾಟಕ ಸ್ಪಾಂಜ್ ಐರನ್ ಓರ್ ಘಟಕಗಳ ರಾಜ್ಯಾಧ್ಯಕ್ಷ ಶ್ರೀನಿವಾಸ್ ಅವರು ಮಾತನಾಡಿ, ಕೊಪ್ಪಳ ವಿಧಾನಸಭಾ ಉಪ ಚುಣಾವಣೆಯ ನಂತರ ಮುಖ್ಯಮಂತ್ರಿಗಳು ತಮ್ಮ ಸಹಾಯಕ್ಕೆ ಬರದೇ ಇದ್ದಲ್ಲಿ ಪುನಃ ಪ್ರತಿಭಟನೆ ನಡೆಸಲಾಗುತ್ತದೆ. ಈವರೆಗೆ ಪ್ರತಿಭಟನೆಗೆ ಸಹಕಾರ ನೀಡಿ ಯಶಸ್ವಿಗೊಳಿಸಲು ನೆರವಾದ ಎಲ್ಲರಿಗೂ ಸಂಘಟನೆ ಕೃತಜ್ಞತೆಗಳನ್ನು ಸಲ್ಲಿಸುತ್ತದೆ, ಧನ್ಯವಾದಗಳನ್ನು ಹೇಳುತ್ತದೆ ಎಂದರು.

English summary
Former health minister B Sriramulu ends fasting after Chief Minister DV Sadananda Gowda assured him to look into the demands of Karnataka Sponge Iron manufacturers association after the Koppal by poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X