ಮಂಪರು ಪರೀಕ್ಷೆಗೆ ಒಲ್ಲೆ ಎಂದ ರೆಡ್ಡಿದ್ವಯರು

ರೆಡ್ಡಿದ್ವಯರು ಈವರೆಗಿನ ವಿಚಾರಣೆಯಲ್ಲಿ ನಕಾರಾತ್ಮಕ ಧೋರಣೆ ತಳೆದಿದ್ದರಿಂದ ಅವರನ್ನು ಇನ್ನಷ್ಟು ಪ್ರಶ್ನಿಸಲು ಸಿಬಿಐ ನಿರ್ಧರಿಸಿದೆ. ಈ ನಡುವೆ, ಜನಾರ್ದನ ರೆಡ್ಡಿ ಅವರನ್ನು ಭಾನುವಾರವೂ ಸಿಬಿಐ ತನಿಖಾಧಿಕಾರಿಗಳು ತಮ್ಮ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದರು.
'ನಾವೆಲ್ಲೂ ಅಕ್ರಮ ಗಣಿಗಾರಿಕೆ ನಡೆಸಿಲ್ಲ. ನಾವು ಪ್ರಾಮಾಣಿಕರು' ಎಂಬುದೇ ಸಿಬಿಐ ಕಸ್ಟಡಿಯಲ್ಲಿರುವ ರೆಡ್ಡಿಗಳ ಬೀಜಮಂತ್ರವಾಗಿದೆ. ಅಷ್ಟೊಂದು ಪ್ರಮಾಣಿಕರಾಗಿದ್ದರೆ ಮಂಪರು ಪರೀಕ್ಷೆಗೆ ಒಳಪಡಬಹುದಲ್ಲಾ ಎಂದು ಸಿಬಿಐ ತರ್ಕ ಮಂಡಿಸಿದೆ. ಏನಾದರಾಗಲಿ, ಈಗ ಸಿಕ್ಕಿರುವ ಸಾಕ್ಷ್ಯಗಳೇ ಸಾಕು ರೆಡ್ಡಿಗಳಿಗೆ ಶಿಕ್ಷೆಯಾಗಲು ಎಂದು ಸಿಬಿಐ ಆಶಾಭಾವದಲ್ಲಿದೆ.
ಇದೇ ವೇಳೆ, ಜನಾ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಅವರ ಸಿಬಿಐ ಕಸ್ಟಡಿ ಅವಧಿ ಸೋಮವಾರ ಅಂತ್ಯಗೊಳ್ಳಲಿದೆ. ಹೀಗಾಗಿ ಇಬ್ಬರನ್ನೂ ಸಿಬಿಐ ಕೋರ್ಟ್ ಮುಂದೆ ಸೋಮವಾರ ಹಾಜರುಪಡಿಸಲಿದೆ. ಮತ್ತೆ 7 ದಿನಗಳ ಕಾಲ ರೆಡ್ಡಿದ್ವಯರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications