ರೆಡ್ಡಿ ಆಪ್ತ ಶಾಸಕ ಸುರೇಶ್ ಬಾಬು ಮೇಲೆ ಸಿಬಿಐ ಕಣ್ಣು

ವಸೂಲಿ ದಂಧೆಯಿಂದ ಹಿಡಿದು, ಬಂದ ಹಣವನ್ನು ಯಾವ ರೀತಿ, ಎಲ್ಲಿಗೆ, ಹೇಗೆ ಸಾಗಿಸಬೇಕು ಎಂಬ ಲೆಕ್ಕಾಚಾರವನ್ನು ಥಟ್ಟನೆ ಹೇಳಿಬಿಡುತ್ತಿದ್ದ ಅಲಿಖಾನ್ ಗೆ ಸುರೇಶ್ ಬಾಬು ಸಾಥ್ ಇದ್ದೇ ಇರುತ್ತಿತ್ತು. ಈ ಕಿಲಾಡಿ ಜೋಡಿ, ರೆಡ್ಡಿ ದಂಧೆಯ ಸಕಲ ನಿರ್ವಹಣೆ ಹೊಣೆ ಹೊತ್ತ ಸೇನಾನಿಗಳಾಗಿದ್ದಾರೆ.
ವಿದೇಶದಲ್ಲಿ ಹೇಗೆ ಹಣ ತೊಡಗಿಸಬೇಕು ಎಂಬುದನ್ನು ಕೂಡ ಹೇಳಿಕೊಡುತ್ತಿದ್ದ ಅಲಿಖಾನ್ ಒಂದು ರೀತಿ ದೇಶಿ, ವಿದೇಶಿ ವ್ಯವಹಾರ ಖಾತೆ ಸಚಿವನಂತೆ ಇದ್ದ. ಅಲಿ ವ್ಯವಹಾರ ಜ್ಞಾನ, ಶ್ರೀರಾಮುಲು ಸಂಬಂಧಿ ಶಾಸಕ ಸುರೇಬ್ ಬಾಬು ತೋಳ್ಬಲ ರೆಡ್ಡಿ ಸಾಮ್ರಾಜ್ಯಕ್ಕೆ ಸದಾ ಶ್ರೀರಕ್ಷೆ ಒದಗಿಸುತ್ತಿತ್ತು.
ಮನಿ ಲಾಂಡರಿಂಗ್ ಕೇಸ್ ಭೀತಿ: ಬಳ್ಳಾರಿ ಅಧಿಕಾರಿಗಳು ಫೋನ್ ಇಟ್ಟುಕೊಂಡು ಥರ ಥರ ನಡುಗುತ್ತಿದ್ದಾರೆ ಇಲ್ಲ ಅಲಿಖಾನ್ ಅಥವಾ ಸುರೇಶ್ ಬಾಬು ಕರೆ ಮಾಡಿದ್ದಾರೆ ಎಂದರ್ಥ. ಗಣಿ ಉದ್ಯಮಕ್ಕೆ ಸಂಬಂಧಿಸಿದಂತೆ ರೆಡ್ಡಿಯ ಎಲ್ಲಾ ಹೊರ ಹೋಗುವ ಕರೆಗಳು ಹಾಗೂ ಒಳಬರುವ ಕರೆಗಳನ್ನು ಅಲಿ ನಿರ್ವಹಿಸುತ್ತಿದ್ದ.
ರೆಡ್ಡಿಗಳ ವಿದೇಶಿ ಕಂಪನಿಗಳಿಗೆ ಅಕ್ರಮ ಅದಿರು ಸಾಗಾಟದಿಂದ ಹಿಡಿದು ವಿದೇಶಿ ಹಣ ಬದಲಾವಣೆ ಅಕ್ರಮದ ಬಗ್ಗೆ ಕೂಡಾ ತನಿಖೆ ನಡೆಯುವ ಸಂಭವವಿದೀ. ಈ ಬಗ್ಗೆ ಜಾರಿ ನಿರ್ದೇಶನಾಲಯ ಇನ್ನೂ ಆಸಕ್ತಿ ವಹಿಸಿಲ್ಲ.
ಅಂತಾರಾಷ್ಟ್ರೀಯ ಹೊಟೇಲ್ ಉದ್ಯಮ ಸಂಸ್ಥೆಯೊಂದರಿಂದ ಬಳ್ಳಾರಿಯಲ್ಲಿ ಬೃಹತ್ ಹೊಟೇಲ್ ನಿರ್ಮಾಣಕ್ಕೂ ಸಿದ್ಧತೆ ನಡೆಸಿದ್ದ ಅಲಿ, ವಿದೇಶಿ ಕಂಪನಿಗಳೊಡನೆ ಆರ್ಥಿಕ ವ್ಯವಹಾರ ನಡೆಸಿದ್ದ. ಕಳೆದ ವರ್ಷ ಅಕ್ಟೋಬರ್ 25 ರಂದು ಆದಾಯ ತೆರಿಗೆ ಅಧಿಕಾರಿಗಳು ರೆಡ್ಡಿ ಕಾಲೋನಿಯಲ್ಲಿರುವ ಈತನ ಮನೆ ಮೇಲೆ ದಾಳಿ ನಡೆಸಿದಾಗ 800 ಕೋಟಿ ರೂ.ಗೂ ಹೆಚ್ಚು ನಗದು ಹಣ ದೊರಕಿತ್ತು ಎಂದು ಆದಾಯ ಇಲಾಖೆಯ ಮೂಲಗಳು ಹೇಳುತ್ತಿವೆ.












Click it and Unblock the Notifications