ಸುರೇಶ್ ಬಾಬು ಮದ್ವೆಗೆ ಜಸ್ಟ್ 20 ಕೋಟಿ ಖರ್ಚು ಕಂಡ್ರಿ

2009ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಕಾಲ, ಆಗಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೂ ಕೂಡಾ ಶಾಸಕ ಸುರೇಶ್ ಮದುವೆಗೆ ಬಂದಿದ್ದರು. ಅದರಲ್ಲಿ ಏನು ವಿಶೇಷ ಎನ್ನಬಹುದು.
ವಿಶೇಷ ಇದೆ. ಯಡಿಯೂರಪ್ಪ ಹಾಗೂ ಸಂಗಡಿಗರನ್ನು ಜಕ್ಕೂರು ವಿಮಾನ ನಿಲ್ದಾಣದಿಂದ ಪಿಕ್ ಮಾಡಿಕೊಂಡು ಬಳ್ಳಾರಿಗೆ ನಾಲ್ಕು ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಯಿತು.
ಜಾಲಿ ರೈಡ್ : ಜಕ್ಕೂರಿನ ತುರ್ತು ಸೇವಾ ನಿರ್ಗಮನಕ್ಕಾಗಿ ಇದ್ದ ಸೌಲಭ್ಯಗಳನ್ನು ಬಳಸಿ ಬಳ್ಳಾರಿಗೆ ಜಾಲಿ ರೈಡ್ ನಡೆಸಿದ್ದರು ಮಾನ್ಯ ಮುಖ್ಯಮಂತ್ರಿಗಳು, ಅವರು ಮದುವೆಗೆ ಬಂದಿದ್ದು ಕಡು ಬಡತನದ ಒಂದು ಜಿಲ್ಲೆಗೆ ಎಂಬುದನ್ನು ಮರೆಯುವಂತಿಲ್ಲ.
ಇದೇ ರೀತಿ ವಿಐಪಿಗಳನ್ನು ನಾಲ್ಕು ಚಾಪರ್ ಗಳು ಹೊತೊಯ್ದವು. ಸುಮಾರು 200ಕ್ಕೂ ಅಧಿಕ ಅಡುಗೆ ಭಟ್ಟರು ನೆರೆದಿದ್ದ 10,000ಕ್ಕೂ ಅಧಿಕ ಮಂದಿಗೆ ಭೋಜನದ ವ್ಯವಸ್ಥೆ ಮಾಡಿದ್ದರು.
ಭರ್ಜರಿ ಬಜೆಟ್ ನ ತೆಲುಗು ಸಿನಿಮಾದ ಸೆಟ್ ವೊಂದರಲ್ಲಿ ನಡೆದ್ದಂತಿದೆ ಎಂದು ಕರ್ನಾಟಕದ ಸಚಿವರು ಅಂದು ಉದ್ಗರಿಸಿದ್ದರು.
ಕಡು ಬಿಸಿಲಿನ ಬಳ್ಳಾರಿಯಲ್ಲಿ ಹೊರಗಡೆ 38 ರಿಂದ 40 ಡಿಗ್ರಿ ತಾಪಮಾನ ಇದ್ದರೂ ಮದುವೆ ಹಾಲ್ ನಲ್ಲಿ ಎಲ್ಲವೂ ಕೂಲ್ ಕೂಲ್ ಆಗಿತ್ತು. 10 ಸಾವಿರ ಮಂದಿ ಅಂದು ಎಸಿ ಸುಖ ಅನುಭವಿಸಿದ್ದರು.
ಮದುವೆ ವೆಚ್ಚ ಸುಮಾರು 20ಕೋಟಿ ರು ಮೀರಿತ್ತು ಎಂದು ವರದಿಯಾಗಿತ್ತು. ಮದುವೆಗೆ ಅಷ್ಟು ಖರ್ಚು ಮಾಡಿದ ಶ್ರೀಮಂತ ಶಾಸಕ ಸುರೇಶ್ ತಿಜೋರಿಯಲ್ಲಿ ಇನ್ನು ಏನೆಲ್ಲ ಇರಬಹುದು ಗೊತ್ತಿಲ್ಲ.
ಅಕ್ರಮ ಗಣಿಗಾರಿಕೆ ತನಿಖೆ ನೆಪದಲ್ಲಿ ದಾಳಿ ಮಾಡುತ್ತಿರುವ ಸಿಬಿಐ ತಂಡಕ್ಕೆ ಅಕ್ರಮ ಆಸ್ತಿ ಪ್ರಕರಣ ಕೂಡಾ ನೀಡಿದರೆ, ಇನ್ನಷ್ಟೂ ಕೋಟ್ಯಾಂತರ ಹಣ ಹೊರ ಬೀಳಬಹುದು.












Click it and Unblock the Notifications