ರೆಡ್ಡಿ ಬಂಟರಾದ ಖಾರದಪುಡಿ, ಸ್ವಸ್ತಿಕ್, ಮಂಜು ಎಸ್ಕೇಪ್

ನಾಳೆ ಮಧ್ಯಾಹ್ನ 1.45ಕ್ಕೆ ಹೈದರಾಬಾದಿನ ಕೋಠಿ ಪ್ರದೇಶದಲ್ಲಿರುವ ಸಿಬಿಐ ಕಚೇರಿಗೆ ಹಾಜರಾಗುವಂತೆ ಸ್ವಸ್ತಿಕ್ ನಾಗರಾಜ್, ಈ ಮಂಜುನಾಥ್ ಹಾಗೂ ಮಹೇಶ್ ಅವರಿಗೆ ಸಿಬಿಐ ನೋಟಿಸ್ ಕಳಿಸಿದ್ದಾರೆ.
14 ಅಧಿಕಾರಿಗಳ ತಂಡ ಹೊಸಪೇಟೆಯಲ್ಲಿರುವ ರೆಡ್ಡಿಗಳ ಆಪ್ತರಾದ ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ, ಹಲವಾರು ಮಹತ್ತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮಹೇಶ್ ಮನೆಯಲ್ಲಿ ಸುಮಾರು 2 ಲಕ್ಷ ಮೌಲ್ಯದ ನಗದು ಸಿಕ್ಕಿದೆ.
ಮುಂದುವರೆದ ದಾಳಿ: ಅಕ್ರಮ ಗಣಿಗಾರಿಕೆ ಬಗ್ಗೆ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನೀಡಿದ ವರದಿಯಲ್ಲೂ ಖಾರಪುಡಿ ಮಹೇಶ್ ಹಾಗೂ ಸ್ವಸ್ತಿಕ್ ನಾಗರಾಜ್ ಹೆಸರು ಉಲ್ಲೇಖಗೊಂಡಿದೆ.
ಬಳ್ಳಾರಿ ನಗರ ನಂತರ ಹೊಸಪೇಟೆ, ತೋರಣಗಲ್ಲು, ಹೊಸಪೇಟೆ ಹಾಗೂ ಸಂಡೂರಿನಲ್ಲಿ ದಾಳಿ ನಡೆದಿದೆ. ಸಂಡೂರಿನ ಟೀಚರ್ಸ್ ಕಾಲೋನಿಯಲ್ಲಿರುವ ಈ. ಮಂಜುನಾಥ್ ಎಂಬುವರ ಮನೆ ಮೇಲೆ ದಾಳಿ ನಡೆದಿದೆ.
2010ರಲ್ಲಿ ಸಿಐಡಿ ದಾಳಿಗೆ ತುತ್ತಾಗಿದ್ದ ಈ ಇಬ್ಬರು ಬಂಟರು ಆಗ ಕೂಡಾ ತಲೆ ಮರೆಸಿಕೊಂಡಿದ್ದರು. ನಾಗರಾಜ್ ಅವರು ಸ್ವಸ್ತಿಕ್ ಸ್ಟೀಲ್ ನ ಮಾಲೀಕ ಹಾಗೂ ಮಹೇಶ್ ಶ್ರೀಲಕ್ಷ್ಮಿ ವೆಂಕಟೇಶ್ವರ ಮಿನಿರಲ್ಸ್ ಮಾಲೀಕರಾಗಿದ್ದಾರೆ.












Click it and Unblock the Notifications