ಗಾಂಧಿನಗರ ಪ್ರದೇಶಕ್ಕೆ ದೊಡ್ಡ ಗೌಡರ ಭೇಟಿ
ಬೆಂಗಳೂರು,
ಸೆ. 18: ಬೆಂಗಳೂರಿನ ಕೆಂಗೇರಿ ಉಪನಗರದ ಬಳಿ ಇರುವ ಗಾಂಧಿನಗರ ಪ್ರದೇಶಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಭೇಟಿ ನೀಡಿದ್ದಾರೆ. ಅವರು ಅಲ್ಲಿ ಸ್ಥಳ ಪರಿಶೀಲನೆ ಹಾಗೂ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. id="toptextpromo">ಅಲ್ಲಿದ್ದ
ಸುಮಾರು 2500 ಮನೆಗಳ ತೆರವಿಗೆ ಕಂದಾಯ ಇಲಾಖೆ ನೋಟೀಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದ ದೇವೇಗೌಡರು ಸ್ಥಳಿಯರೊಂದಿಗೆ ನಡೆಸಿದ ಮಾತುಕತೆ, ವಿವರಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಾಗಿದೆ. id='are-slot-1' class='oiad oi-axt oiadv'> id='top-searched-articles'>ದೇವೇಗೌಡರ
ಭೇಟಿಯೆಂದರೆ ಎಲ್ಲರಿಗೂ ಕುತೂಹಲ ಸಹಜ. 24 ಗಂಟೆಗಳೂ ರಾಜಕೀಯವನ್ನೇ ಉಸಿರಾಡುವ ದೇವೇಗೌಡ್ರು ಎಲ್ಲಿ ಹೋದರೂ ಜನರ ಕಣ್ಣುಗಳು ಹಿಂಬಾಲಿಸಿವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ದೊಡ್ಡಗೌಡರ ಈ ಭೇಟಿಯ ಲಾಭ ಅಲ್ಲಿನ ಜನರಿಗೆ ಲಭ್ಯವಾಗಲಿದೆಯೇ ಅಥವಾ ಕಂದಾಯ ಇಲಾಖೆಯ ಕಾರ್ಯ ಮುಂದುವರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಷ್ಟೇ!











Click it and Unblock the Notifications