ದೇವೇಗೌಡ, ಸದಾನಂದರಿಗೆ ಟಾಂಗ್ ಕೊಟ್ಟು ಬೀಗಿದ್ದ ರೆಡ್ಡಿ
ಬೆಂಗಳೂರು,
ಸೆ.16: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದ ವಶದಲ್ಲಿದ್ದ KMF ಅಧ್ಯಕ್ಷ ಸ್ಥಾನವನ್ನು ಪಡೆಯಲೇಬೇಕೆಂದು ಆಗ ಬದ್ಧವೈರಿಗಳಾಗಿದ್ದ ರೆಡ್ಡಿಗಳು ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದರು. ಹಿರಿಯ ರೆಡ್ಡಿ ನಿರ್ಣಾಯಕ ಪಾತ್ರ ವಹಿಸಿದ್ದರು. ಎಚ್ ಡಿ ರೇವಣ್ಣ ಅಧ್ಯಕ್ಷರಾಗದಂತೆ ಎಲ್ಲಾ ಪ್ರಯತ್ನ ಮಾಡಲಾಗಿತ್ತು. id="toptextpromo">ಈ
ಸಹಕಾರಿ ಸಂಸ್ಥೆಯ ಆಡಳಿತ ಮಂಡಳಿಯ ಅಧಿಕಾರಾವಧಿ ಐದು ವರ್ಷಗಳಾದರೂ ಸಹ ಅಧ್ಯಕ್ಷ ಸ್ಥಾನದ ಅವಧಿ ಎರಡೂವರೆ ವರ್ಷಗಳು ಮಾತ್ರ. ಆಗ ಸೋಮಶೇಖರ ರೆಡ್ಡಿ ಅವರೊಂದಿಗೆ ಪೈಪೋಟಿ ನಡೆಸಿದ ಡಿವಿ ಸದಾನಂದಗೌಡರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಈಗ ಮುಖ್ಯಮಂತ್ರಿಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಧ್ಯಕ್ಷ
ಸ್ಥಾನ ಸಿಗಲಿಲ್ಲವೆಂದು ಸದಾನಂದಗೌಡ ಮಿನಿಸಿಕೊಂಡಿದ್ದರು. ಸದಾನಂದರಿಗೆ ಯಡಿಯೂರಪ್ಪನೇ ಅಡ್ಡಗಾಲು ಹಾಕಿದ್ದರು. ಸದಾನಂದರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಹ ಮುಂದಾಗಿದ್ದರು. ಆಗ ಹಠ ಮಾಡಿ ಈ ಹುದ್ದೆಯನ್ನು ತಮ್ಮ ಗುಂಪಿಗೆ ಪಡೆಯಲು ಯತ್ನಿಸಿದ ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ. ಇದು ಪರಿಸ್ಥಿತಿಯ ಕ್ರೂರ ವ್ಯಂಗ್ಯವೇ ಸರಿ.











Click it and Unblock the Notifications