ಸೆ.20 ಕ್ಕೆ ಚುನಾವಣೆ: ರೆಡ್ಡಿಗಳ ಕೈಜಾರಲಿದೆ KMF

kmf-slipping-out-of-somashekara-reddy-grip
ಬೆಂಗಳೂರು, ಸೆ.16: ಸಿಬಿಐ ಕುಣಿಕೆಗೆ ಸಿಲುಕಿರುವ ರೆಡ್ಡಿ ಸಹೋದರರು ಒಂದೊಂದೇ ಅಧಿಕಾರ ಕೈತಪ್ಪುತ್ತಿದೆಯೇ? ಹಿರಿಯ ರೆಡ್ಡಿ ಜನಾಗಾರು ಜೈಲುಪಾಲಾಗುವ ಮುನ್ನಾದಿನ ಬಿಜೆಪಿಯ ರಾಜಕೀಯದಿಂದ ಬೇಸತ್ತು ಅವಸರಕ್ಕೆ ಬಿದ್ದ 'ಶ್ರೀರಾಮ'ಲು ರಾಜೀನಾಮೆ ಒಗಾಯಿಸಿದ್ದೇ ಬಂತು ಅಧಿಕಾರ ಕೈತಪ್ಪಿತು.

ಆನಂತರದ ಬೆಳವಣಿಗೆಗಳು ಬಿಜೆಪಿಗೆ ವರವಾಗಿ ಪರಿಣಮಿಸಿವೆ. ಬಿಜೆಪಿ, ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಯವಾಗಿ ರೆಡ್ಡಿ ಕುಟುಂಬದಿಂದ ದೂರವಾಗತೊಡಗಿತು. ಇದೀಗ ಕರ್ನಾಟಕ ಹಾಲು ಮಹಾಮಂಡಲದ (KMF) ಅಧ್ಯಕ್ಷ ಸ್ಥಾನ ಸೋಮಶೇಖರ ರೆಡ್ಡಿ ಕೈಯಲ್ಲಿ ಉಳಿಯುವುದೋ ಅಥವಾ ಕೈಬಿಡುವುದೋ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಅತ್ತ, ಕೊಪ್ಪಳ ಉಪ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಬೆವರಿಳಿಸುತ್ತಿದ್ದರೆ, KMF ನಿರ್ದೇಶಕರುಗಳ ಮಧ್ಯೆ ಅಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿ ಹೋರಾಟ ನಡೆದಿದೆ. ಅಂದಹಾಗೆ, ಇದೇ ಸೆಪ್ಟೆಂಬರ್ 20ರಂದು KMF ಚುನಾವಣೆ ನಿಗದಿಯಾಗಿದೆ.

ಅದೊಮ್ಮೆ ಸೋಮಶೇಖರ ರೆಡ್ಡಿ ಸೋತರೆ ದೊಡ್ಡಗೌಡರಿಗೆ ಹಾಲು ಕುಡಿದಷ್ಟು ಸಂತೋಷವಾಗುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಇದೇ ರೆಡ್ಡಿ ಸೋದರರು ದೇವೇಗೌಡರ ಪುತ್ರರತ್ನ ರೇವಣ್ಣರನ್ನು ಅಧಿಕಾರ ವಂಚಿತರನ್ನಾಗಿಸಿದ್ದರು.

ಎರಡೂವರೆ ವರ್ಷಗಳ ಹಿಂದೆ ಹಠ ಮಾಡಿ ಈ ಹುದ್ದೆಯನ್ನು ರೆಡ್ಡಿ ಸಹೋದರರಲ್ಲಿ ಒಬ್ಬರಾದ ಗಾಲಿ ಸೋಮಶೇಖರ ರೆಡ್ಡಿ ಅವರಿಗೆ KMF ದಕ್ಕಿಸಿಕೊಳ್ಳಲಾಗಿತ್ತು. ಇದೀಗ ರೆಡ್ಡಿಯ ಅಧಿಕಾರದ ಅವಧಿ ಮುಗಿಯುತ್ತಿದೆ. ನೂತನ ಅಧ್ಯಕ್ಷರ ಆಯ್ಕೆಗಾಗಿ ಸೆ. 20ರಂದು ಚುನಾವಣೆ ನಿಗದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+