KMF ಅಧ್ಯಕ್ಷಗಿರಿ ಶಿವಮೊಗ್ಗದ ರೇವಣ್ಣಸಿದ್ದಪ್ಪ ಪಾಲಾಗಬಹುದೇ?

bsy
ಬೆಂಗಳೂರು, ಸೆ.16: KMFನಲ್ಲಿ ಒಟ್ಟು 18 ನಿರ್ದೇಶಕರ ಹುದ್ದೆಗಳಿವೆ. ಇದರಲ್ಲಿ ಆಡಳಿತರೂಢ ಬಿಜೆಪಿ 9 ನಿರ್ದೇಶಕರನ್ನು ಹೊಂದಿದ್ದರೆ, ಜೆಡಿಎಸ್‌ನಿಂದ ಮೂವರು ನಿರ್ದೇಶಕರಿದ್ದಾರೆ. ಮೂವರು ನಾಮನಿರ್ದೇಶಿತ ಹಾಗೂ ಮೂವರು ಅಧಿಕಾರಿ ಸದಸ್ಯರಿದ್ದಾರೆ. ನಾಮನಿರ್ದೇಶಿತ ಹಾಗೂ ಅಧಿಕಾರಿಗಳಿಗೂ ಇಲ್ಲಿ ಮತದಾನದ ಹಕ್ಕಿದೆ. ಇದರಿಂದಾಗಿ ಬಿಜೆಪಿಯ ಬಲ 15ಕ್ಕೆ ಏರುತ್ತದೆ. ಆದ್ದರಿಂದ ಅಧ್ಯಕ್ಷ ಸ್ಥಾನ ಬಿಜೆಪಿಯಲ್ಲೇ ಉಳಿಯುವುದರಲ್ಲಿ ಅನುಮಾನವಿಲ್ಲ.

ಅಧ್ಯಕ್ಷ ಸ್ಥಾನದಲ್ಲಿ ಮತ್ತೂಂದು ಅವಧಿಗೆ ಮುಂದುವರಿಯಬೇಕೆಂಬುದು ಸೋಮಶೇಖರ ರೆಡ್ಡಿ ಅವರ ಆಸೆಯೂ ಆಗಿದೆ. ಆದರೆ ಪ್ರಬಲ ಲಾಬಿ ಮಾಡುವ ಪರಿಸ್ಥಿತಿಯಲ್ಲಿ ಈಗ ಅವರಿಲ್ಲ. ತಮ್ಮ ಸಹೋದನಿಗೆ ಸಿಬಿಐ ಕುಣಿಕೆ ಬಿದ್ದಿರುವುದರಿಂದ ಹೈರಾಣಗೊಂಡಿದ್ದಾರೆ.

ಇಂತಹ ಸ್ಥಿತಿಯಲ್ಲಿ ರಾಮನಗರ ಜಿಲ್ಲಾ ಹಾಲು ಮಹಾಮಂಡಳದ ಪಿ. ನಾಗರಾಜ್‌ ಹಾಗೂ ಶಿವಮೊಗ್ಗ ಜಿಲ್ಲಾ ಹಾಲು ಮಹಾಮಂಡಳದ ಜಿ.ಎಸ್‌. ರೇವಣ್ಣಸಿದ್ದಪ್ಪ ಅವರು ಅಧ್ಯಕ್ಷರಾಗಲು ಶತಾಯಗತಾಯ ಪೈಪೋಟಿ ನಡೆಸಿದ್ದಾರೆ.

ಈಗಿನ ಆಡಳಿತ ಮಂಡಳಿಯ ಅವಧಿ ಮುಗಿಯುವುದರಲ್ಲಿ ರಾಜ್ಯದಲ್ಲಿ ಬಿಜೆಪಿಯ ಅಧಿಕಾರಾವಧಿ ಮುಗಿದು ಹೋಗಿರುತ್ತದೆ. ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಅದೇ ಪಕ್ಷದ ಹಿಡಿತಕ್ಕೆ KMF ಹೋಗುವ ಸಾಧ್ಯತೆಗಳಿರುವುದರಿಂದಲೇ ನಾಗರಾಜ್‌ ಮತ್ತು ರೇವಣ್ಣಸಿದ್ದಪ್ಪ ತೀವ್ರ ಸ್ಪರ್ಧೆಯೊಡ್ಡಿದ್ದಾರೆ ಎಂದು KMF ಮೂಲಗಳು ಹೇಳುತ್ತವೆ.

ನಾಗರಾಜ್‌ ರಾಮನಗರ ಜಿಲ್ಲೆಯವರಾಗಿರುವುದು ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಜೆಡಿಎಸ್‌ನ ಪ್ರಾಬಲ್ಯವನ್ನು ಕಡಿಮೆ ಮಾಡುವ ಪ್ರಯತ್ನ ಸಹ ಇದರಿಂದ ಸಾಧ್ಯವಾಗಬಹುದು ಎಂದೇ ಚರ್ಚಿಸಲಾಗುತ್ತಿದೆ. ಆದರೆ ರೇವಣ್ಣಸಿದ್ದಪ್ಪರ ಬೆಂಬಲಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿಂತಿದ್ದಾರೆಂದು ಹೇಳಲಾಗುತ್ತಿದೆ. ಬಿಜೆಪಿಯ ವರಿಷ್ಠರು ಕೈಗೊಳ್ಳುವ ತೀರ್ಮಾನದ ಮೇಲೆ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ನಿರ್ಧಾರವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+