ಹಾಲಿನ ದರ ಏರಿಸಿದ್ದೇ ಸೋಮ ರೆಡ್ಡಿಯ ದೊಡ್ಡ ಸಾಧನೆ
ಬೆಂಗಳೂರು,
ಸೆ.16: KMFನಲ್ಲಿ ಸಾಕಷ್ಟು ಬದಲಾವಣೆ ತರುವುದಾಗಿ ಹೇಳಿಕೊಂಡೇ ಸೋಮಶೇಖರ ರೆಡ್ಡಿ ಅಧಿಕಾರದ ಗದ್ದುಗೆ ಹಿಡಿದಿದ್ದರು. ಆದರೆ ಅವರ ಅವಧಿಯಲ್ಲಿ ಹೆಚ್ಚಿನ ಬದಲಾವಣೆ ಏನು ಕಂಡು ಬರಲಿಲ್ಲವೆಂಬುದು KMFನಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ. ಎರಡು ಬಾರಿ ಹಾಲಿನ ದರ ಏರಿಕೆ ಹೊರತುಪಡಿಸಿದರೆ ಇನ್ನಾವುದೇ ಸುಧಾರಣೆಯನ್ನು ಮಹಾಮಂಡಲ ಕಾಣಲಿಲ್ಲ. id="toptextpromo">ಎಚ್
ಡಿ
ರೇವಣ್ಣ
ವಿರುದ್ಧ
ಬೆಟ್ಟ
ಅಗೆದು
ಇಲಿಯನ್ನೂ
...
ಸೋಮಶೇಖರ ರೆಡ್ಡಿ ಅಧ್ಯಕ್ಷರಾಗುತ್ತಿದ್ದಂತೆ ತಮ್ಮ ಹಿಂದಿನ ಅಧ್ಯಕ್ಷ ಎಚ್ ಡಿ ರೇವಣ್ಣರ ಕಾಲದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಕಾರಣಕ್ಕೆ ತನಿಖೆಗೆ ಮುಂದಾಗಿದ್ದರು. ಸಹಕಾರ ಸಚಿವರಾಗಿದ್ದ ಲಕ್ಷ್ಮಣ ಸವದಿ ಸಹ ಇದಕ್ಕೆ ಒತ್ತಾಸೆಯಾಗಿ ನಿಂತಿದ್ದರು. ರೇವಣ್ಣ ಬರೋಬ್ಬರಿ 15 ವರ್ಷ ಕಾಲ KMF ಅಧ್ಯಕ್ಷಗಾದಿ ಮೇಲೆ ಪಟ್ಟಾಗಿ ಕುಳಿತಿದ್ದರು. ಕುರಿಯನ್ ಎಂಬ ಶ್ವೇತಕ್ರಾಂತಿಯ ಹರಿಕಾರನನ್ನು ಮಾಜಿ ಪ್ರಧಾನಿ ಅಷ್ಟರಮಟ್ಟಿಗೆ ಮರುಳುಮಾಡಿದ್ದರು! id='are-slot-1' class='oiad oi-axt oiadv'> id='top-searched-articles'>
ಇಂತಹ
ರೇವಣ್ಣನ ವಿರುದ್ಧ ಸಹಕಾರ ಇಲಾಖೆಯ ಅಧಿಕಾರಿಗಳು ಸಾಕಷ್ಟು ತಡಕಾಡಿದರು. ಬೆಟ್ಟ ಅಗೆದರೂ ಇಲಿಯೂ ಸಿಗಲಿಲ್ಲ ಎಂಬ ಮಾತಿನಂತೆ ಇದುವರೆಗೂ ತನಿಖಾ ವರದಿಯೇ ಬಯಲಿಗೆ ಬರಲಿಲ್ಲ. ಸಚಿವ ಸವದಿ ಮಾತ್ರ ಪ್ರತಿ ಬಾರಿ ಸುದ್ದಿಗೋಷ್ಠಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಎದುರಿಸುವುದು, ನಗುತ್ತ ಜಾರಿಕೊಳ್ಳುವುದು ಮಾಮೂಲಿಯೇ ಆಗಿದೆ.











Click it and Unblock the Notifications